BIG NEWS : ಗ್ಯಾರೆಂಟಿ ಯೋಜನೆಗಳ ಬಗ್ಗೆ ನನಗೆ ಭಯವಿದೆ : ಶಾಸಕ ರಾಯರೆಡ್ಡಿ..!!

You are currently viewing BIG NEWS : ಗ್ಯಾರೆಂಟಿ ಯೋಜನೆಗಳ ಬಗ್ಗೆ ನನಗೆ ಭಯವಿದೆ : ಶಾಸಕ ರಾಯರೆಡ್ಡಿ..!!

ವರದಿ : ಚಂದ್ರು ಆರ್ ಭಾನಾಪೂರ್

ಕುಕನೂರು : ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನನಗೆ ಬಹಳ ಭಯವಿದೆ. ಏಕೆಂದರೆ ಈ ಗ್ಯಾರೆಂಟಿ ಯೋಜನೆಗಳಿಗಾಗಿ ನಾವು ಸಾವಿರಾರು ಕೋಟಿಯನ್ನ ವೆಚ್ಚ ಮಾಡಲಿದ್ದೇವೆ. ಹಾಗಾಗಿ ನಮಗೆ ಮೊದಲ ಆದ್ಯತೆಯೇ ಗ್ಯಾರಂಟಿ ಯೋಜನೆಗಳು’ ಎಂದು ಮುಖ್ಯಮಂತ್ರಿಗಳ ನೂತನ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅಭಿಪ್ರಾಯ ಪಟ್ಟರು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 LOCAL BREAKING : ಜುಲೈನಲ್ಲಿ ಮಂತ್ರಿ ಸ್ಥಾನ, ಸಿಎಂ ಸಿದ್ದರಾಮಯ್ಯ ಭರವಸೆ : ಬಸವರಾಜ್ ರಾಯರಡ್ಡಿ ಹೇಳಿಕೆ..!! 

ಕುಕನೂರು ಪಟ್ಟಣದ ಪ್ರಮುಖ ಬೀದಿ ತೇರಿನ ಗಡ್ಡೆಯಲ್ಲಿ ಮುಖ್ಯಮಂತ್ರಿಗಳ ನೂತನ ಆರ್ಥಿಕ ಸಲಹೆಗಾರ ರಾಗಿ ಸಂಪುಟ ದರ್ಜೆಯ ಸ್ಥಾನಮಾನ ದೊರೆತಿದ ಸಲುವಾಗಿ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ತಾಲೂಕು ಆಡಳಿತ ಪಟ್ಟಣ ಪಂಚಾಯತ್ ಕುಕುನೂರು ನಾಗರಿಕರಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಯರೆಡ್ಡಿ, ‘ಇಡೀ ದೇಶದಲ್ಲೇ ಹೊಸದೊಂದು ಕ್ರಾಂತಿಗೆ ಹಾಗೂ ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದಲೇ ಜನಪ್ರಿಯತೆ ಪಡೆದಿದೆ. ಈ ಗ್ಯಾರಂಟಿ ಯೋಜನೆಗಳಿಂದ ತಿರಾ ಬಡತನ ಹಾಗೂ ಸಾಮಾನ್ಯ ಜನರಿಗೆ ಬಹಳಷ್ಟು ಸಹಕಾರಿಯಾಗಿದ್ದು, ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಈ ಯೋಜನೆಗಳಿಗೆ ಫಲಾನುಭವಿಗಳಾಗಿರುತ್ತಾರೆ ಎಂದು ಹೇಳಿದರು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 Local news : ಶನಿವಾರ, ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಭಾಗಿ

‘ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಂಬುದು ಬಹಳ ದೊಡ್ಡ ಜವಾಬ್ದಾರಿ ಆಗಿದ್ದು, ಆರ್ಥಿಕತೆ ವಿಷಯದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆಗಳನ್ನ ನೀಡುವ ಅವಕಾಶ ನನಗೆ ದೊರೆತಿದೆ ಹಾಗಾಗಿ ಬಹಳ ಸಂತೋಷವಾಗಿದೆ. ಇದಷ್ಟೇ ಅಲ್ಲದೆ ಮುಂದಿನ ಜುಲೈ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆಯಿದ್ದು, ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉  BREAKING : “ಶಕ್ತಿ ಯೋಜನೆ”ಗೆ 6 ತಿಂಗಳುಗಳಲ್ಲಿ ಖರ್ಚಾದ ಹಣ ಎಷ್ಟು ಗೊತ್ತಾ?, ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಈ ಕಾರ್ಯಾಕ್ರಮದಲ್ಲಿ ತಹಸೀಲ್ದಾರ್ ಎಚ್ ಪ್ರಾಣೇಶ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್,  ಯಲಬುರ್ಗಾ ತಾಲೂಕಾ ತಹಶೀಲ್ದಾರ್, ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಬ್ರಮಣ್ಯ, ಸಿ ಪಿ ಐ ಮೌನೇಶ್ ಮಾಲಿ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಸವರಾಜ್ ಉಳ್ಳಾಗಡ್ಡಿ, ಹನುಮಂತ್ ಗೌಡ ಚೆಂಡೂರು, ಈರಣ್ಣ ಹಳ್ಳಿಕೇರಿ, ಅಶೋಕ್ ತೋಟದ್, ಕೇರಿಬಸಪ್ಪ ನಿಡಗುಂದಿ, ಬಸವರಾಜ್ ಪೂಜಾರ್, ಗಗನ ನೋಟಗಾರ, ನೂರ ಅಹಮದ್, ಸಂಗಮೇಶ್ ಗುತ್ತಿ, ರಹೇಮಾನ್ ಸಾಬ್ ಮಕ್ಕಣನವರ್ ತಾಲೂಕಾ ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

Leave a Reply

error: Content is protected !!