LOCAL EXPRESS : ಯಲಬುರ್ಗಾದಲ್ಲಿ KSRTC ಬಸ್ ಡ್ರೈವರ್ ನ ನಿರ್ಲಕ್ಷದಿಂದ ವಿದ್ಯಾರ್ಥಿನಿ ಸಾವು..!

You are currently viewing LOCAL EXPRESS :  ಯಲಬುರ್ಗಾದಲ್ಲಿ KSRTC ಬಸ್ ಡ್ರೈವರ್ ನ ನಿರ್ಲಕ್ಷದಿಂದ ವಿದ್ಯಾರ್ಥಿನಿ ಸಾವು..!

PV NEWS :-

LOCAL EXPRESS : ಕೆ. ಎಸ್. ಆರ್. ಟಿ. ಸಿ ಬಸ್ ಡ್ರೈವರ್ ನ ನಿರ್ಲಕ್ಷದಿಂದ ವಿದ್ಯಾರ್ಥಿನಿ ಒಬ್ಬಳ ಸಾವು

ಯಲಬುರ್ಗಾ : ಪಟ್ಟಣದಲ್ಲಿ ಕೆ. ಎಸ್. ಆರ್. ಟಿ. ಸಿ ಬಸ್ ಡ್ರೈವರ್ ನ ನಿರ್ಲಕ್ಷದಿಂದ ವಿದ್ಯಾರ್ಥಿನಿ ಒಬ್ಬಳ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇಂದು ಸಂಜೆ 5:00 ಗಂಟೆ ಸುಮಾರಿಗೆ ನಗರದ ತಾಲೂಕು ಪಂಚಾಯಿತಿ ಎದುರುಗಡೆ ಸರ್ಕಾರಿ ಕೆಎಸ್ಆರ್ಟಿಸಿ ಬಸ್ ವಿದ್ಯಾರ್ಥಿನಿ ಮೇಲೆ ಹರಿದು ಹೋಗಿ ದುರ್ಮರಣಕ್ಕೆ ಇಡಾಗಿದ್ದಾಳೆ ಎಂದು ಮಾಹಿತಿ ಇದೆ.

ಮೃತ ವಿದ್ಯಾರ್ಥಿನಿ ಸಾನ್ವಿ ಎಂದು ಗುರುತಿಸಲಾಗಿದೆ. ಮೃತ ಬಾಲಕಿ 2ನೇ ತರಗತಿ ಓದುತ್ತಿದ್ದಳು, ಸಂಜೆ ವೇಳೆ ಶಾಲೆ ಮುಗಿಸಿಕೊಂಡು ಮನೆಕಡೆಗೆ ತಮ್ಮ ಚಿಕ್ಕಪ್ಪನ ಜೊತೆಗೆ ಹೊಗುತ್ತಿದ್ದಳು ಈ ವೇಳೆ ಹಿಂದುಗಡೆಯಿಂದ ಬಸ್‌ ಬಂದು ಬಾಲಕಿಯ ಮೇಲೆ ಹರಿದು ಹೋಗಿದೆ. ಮೃತ ಬಾಲಕಿ ಇದೇ ಪಟ್ಟಣದ ನಿವಾಸಿಯಾಗಿದ್ದಾಳೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಘಟನೆಯು ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೇನು ಪ್ರಕರಣ ದಾಖಲಾಗಬೇಕಿದೆ ಅಷ್ಟೇ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ…..

Leave a Reply

error: Content is protected !!