LOCAL NEWS : ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಸೌರಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಸೋಮವಾರದಂದು 2024-25 ನೇ ಸಾಲಿನ ಮಕ್ಕಳ ಕಲರವ ಕಾರ್ಯಕ್ರಮ ಜರಗಿದ್ದು, ಶಾಲೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ಸಮಾಜ ವಿಜ್ಞಾನ ವಸ್ತು ಪ್ರದರ್ಶನ ಜರಗಲಿದೆ. ಈ ಕಾರ್ಯಕ್ರಮವನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತಾ ಅವರು ಉದ್ಘಾಟಿಸುವರು. ದಿನಾಂಕ 24 ರಂದು ಮಂಗಳವಾರ ಸಾಯಂಕಾಲ 5:00 ಗಂಟೆಗೆ ಸಾಂಸ್ಕೃತಿಕ ಸೌರಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರಗಲಿದೆ. ಗವಿ ಬೆಳಗು ಎಂಬ ಹೆಸರಿನ ಶಾಲಾ ಪತ್ರಿಕೆಯನ್ನು ಅಳವಂಡಿಯ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಎಮ್.ಎಸ್.ಹೊಟ್ಟಿನ ಬಿಡುಗಡೆಗೊಳಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗವಿವಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಡಾ||ಆರ್.ವರೇಗೌಡ ಹಾಗೂ ಶಾಲೆಯ ಆಡಳಿತ ಅಧಿಕಾರಿಗಳಾದ ಗವಿಸಿದ್ದಪ್ಪ ಕೊಪ್ಪಳ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈ.ಎಸ್.ಬಿರಾದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯ.ಟಿ.ಎಸ್ ರವರು ಭಾಗವಹಿಸುವರು. ಸಾಯಂಕಾಲ 6.00 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.