ರಾಜಾಹುಲಿ ನಟನ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ!

You are currently viewing ರಾಜಾಹುಲಿ ನಟನ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ!

ನಟ ಯಶ್‌ ನಟನೆಯ ‘ರಾಜಾಹುಲಿ’ ಸಿನಿಮಾದಲ್ಲಿ ಅವರ ಗೆಳೆಯನ ಪಾತ್ರದಲ್ಲಿ ನಟಿಸಿದ್ದ ಹರ್ಷ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ‘ತಮಗೆ ಅಸಭ್ಯವಾಗಿ ಸಂದೇಶ ಕಳಿಸಿದ್ದಾರೆ’ ಎಂದು ನಟಿ ತನಿಷಾ ಕುಪ್ಪಂಡ ಅಳಲು ತೊಡಿಕೊಂಡಿದ್ದಾರೆ. ‘ಪೆಂಟಗನ್’ ಕನ್ನಡ ಚಿತ್ರದಲ್ಲಿ ನಟಿಸಿರುವ ತನಿಷಾ ಈ ಆರೋಪ ಮಾಡಿದ್ದು, ತಾವು ಹಾಕಿದ್ದ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು ಸ್ಮೈಲಿ ಇಮೇಜಿನೊಂದಿಗೆ ಸಂದೇಶ ಕಳಿಸಿದ್ದಾನೆ ಎಂದಿದ್ದಾರೆ.

ಹಿನ್ನಲೆ :- ಇತ್ತೀಚಿಗೆ ನಟಿ ತನಿಷಾ ಅವರ ಸಂದರ್ಶನ ಮಾಡಿದ್ದ ಯೂಟ್ಯೂಬರ್ ಒಬ್ಬ ನೀವು ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಸಿದ್ದರಿದ್ದೀರಾ ಎಂದು ಅಸಭ್ಯ ಪ್ರಶ್ನೆ ಕೇಳಿದ್ದ. ಇದನ್ನು ಪ್ರತಿಭಟಿಸಿದ್ದ ನಟಿ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದರು. ಅದೇ ವಿಷಯವಾಗಿ ಮಾಹಿತಿ ನೀಡಲು ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು, ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅಸಭ್ಯವಾಗಿ ಪ್ರಶ್ನೆ ಮಾಡಿದ ಆ ಯುಟ್ಯೂಬರ್ ಹೊರಗಿನವರ, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ನನ್ನ ಸಹನಟನೇ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದರು.

ಯಾರು ಹಾಗೆ ಮೆಸೇಜ್ ಮಾಡಿದ್ದು ಹೆಸರು ಹೇಳಿ ಎಂದಾಗ, ಮೊದಲಿಗೆ, ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೆ ಹೇಳಿದರು, ಬಳಿಕ ಪತ್ರಕರ್ತರು ಒತ್ತಾಯ ಮಾಡಿದಾಗ ಹರ್ಷ ಹೆಸರು ಹೇಳಿದರು ನಟಿ ತನಿಷಾ. ಇನ್​ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಇಂತಹ ವ್ಯಕ್ತಿಗಳ ಕುಚೇಷ್ಟೇ ಮಾತುಗಳಿಂದ ಸಮಾಜದಲ್ಲಿ ಒಂದು ಹೆಣ್ಣುನ್ನು ನೋಡುವ ಮನೋಭಾವನೆಯೇ ಬೇರೆಯಾಗುತ್ತದೆ ಎಂದು ಕಣ್ಣೀರು ಹಾಕಿದರು.

Leave a Reply

error: Content is protected !!