ಯಲಬುರ್ಗಾ— ತಾಲೂಕಿನ ಕರಮುಡಿ ಗ್ರಾಮದ ಸಾಹಿತಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ ರವರ 9 ನೇ ಕೃತಿ “ಕರವೀರನ ರುಬಾಯಿಗಳು” ಹಾಗೂ ಸಂಕನೂರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಬಸವರಾಜ ಅಂದಪ್ಪ ರಾಟಿ ರವರ ಪ್ರಥಮ ಕೃತಿ “ನೀ ಮೌನಿಯಾದಗ…” ಕವನ ಸಂಕಲನಗಳು ಇದೇ ಮಾ. 7ರಂದು ಬೆ.10—30 ಕ್ಕೆ ನಗರದ ಎಸ್.ಎ.ನಿಂಗೋಜಿ ಬಿ.ಇಡಿ.ಕಾಲೇಜಿನಲ್ಲಿ ಲೋಕರ್ಪಣೆ ಗೊಳ್ಳಲಿವೆ.
ಲಲಿತಾ ಹಾಗೂ ಕಾಲಕಾಲೇಶ್ವರ ಪ್ರಕಾಶನ ಕರಮುಡಿ ಇವುಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಕೆ.ಬಿ. ಬ್ಯಾಳಿ ವಹಿಸುವರು.
ವೀರಪ್ಪ ನಿಂಗೋಜಿಯವರ “ಕರವೀರನ ರುಬಾಯಿಗಳು” ಕೃತಿಯನ್ನು ಕೊಪ್ಪಳದ ಸಾಹಿತಿ ಹಾಗೂ ಶಿಕ್ಷಕರಾದ ಅನುಸೂಯಾ ಜಹಾಗೀರದಾರ ರವರು ಬಿಡುಗಡೆ ಗೊಳಿಸಿ ಪರಿಚಯಸಿಲಿದ್ದಾರೆ. ಹಾಗೂ ಬಸವರಾಜ ರಾಟಿಯವರ “ನೀ ಮೌನಿಯಾದಾಗ….ಕವನ ಸಂಕಲನವನ್ನು ಅಕ್ಭರ ಸಿ.ಕಾಲಿಮಿರ್ಚಿ ರವರು ಬಿಡುಗಡೆ ಗೊಳಿಸಿ ಕೃತಿಯನ್ನು ಪರಿಚಯಸಿಲಿದ್ದಾರೆ.
ಸಾಹಿತಿ ವೀರಣ್ಣ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವ್ರದ್ಧಿ ಟ್ರಸ್ಟಿನ ಅಧ್ಯಕ್ಷರಾದ ಎಸ್.ಎ.ನಿಂಗೋಜಿ, ಗದುಗಿನ ಫ್ರೋ.ಡಾ. ಮಲ್ಲಣ್ಣ ರಾಟಿˌ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಜಿ.ಪಾಟೀಲ ˌ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ಬೆಣಕಲ್ಲ, ನಿಂಗೋಜಿ ಬಿ.ಇಡಿ.ಕಾಲೇಜಿನ ಪ್ರಾ.ಡಾ. ಎಚ್ˌ ವೀರಬಧ್ರಪ್ಪ ಹಾಗೂ ಇನ್ನೀತರ ಪ್ರಮುಖರು ಉಪಸ್ಥಿತರಲಿದ್ದಾರೆ.
ಮಾ. 7ರಂದು “ಕರವೀರನ ರುಬಾಯಿಗಳು”, ಹಾಗು ” ನೀ ಮೌನಿಯಾದಗ” ಪುಸ್ತಕ ಲೋಕಾರ್ಪಣೆ ಸಮಾರಂಭ
