ಬಿಜೆಪಿ ಯುವ ಮೋರ್ಚಾ ದಿಂದ ತಿರಂಗ ಯಾತ್ರೆ : ಮೊಳಗಿದ ರಾಷ್ಟ್ರ ಭಕ್ತಿಯ ಕೂಗು.!!!!!

ಬಿಜೆಪಿ ಯುವ ಮೋರ್ಚಾ ದಿಂದ ತಿರಂಗ ಯಾತ್ರೆ : ಮೊಳಗಿದ ರಾಷ್ಟ್ರ ಭಕ್ತಿಯ ಕೂಗು.!!!!!

ಯಲಬುರ್ಗಾ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ದಿಂದ ಯಲಬುರ್ಗಾ ಪಟ್ಟಣದಲ್ಲಿ ತಿರಂಗ ಯಾತ್ರೆ ನಡೆಯಿತು.

ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಭಕ್ತ ಕನಕದಾಸ ವೃತ್ತದ ಮೂಲಕ ರಾಣಿ ಚನ್ನಮ್ಮ ವೃತ್ತದವೆರಿಗೂ ಬಿಜೆಪಿ ಕಾರ್ಯಕರ್ತರು ಯಾತ್ರೆ ಮಾಡಿದರು. ಭಾರತ ಮಾತಾ ಕೀ ಜೈ, ವಂದೇ ಮಾತರಂ ದೇಶ ಭಕ್ತಿಯ ಘೋಷಣೆ ಕಾರ್ಯಕರ್ತರಿಂದ ಮೊಳಗಿತು.

ತಿರಂಗ ಯಾತ್ರೆಯ ಕಾರ್ಯಕ್ರಮದಲ್ಲಿ ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ್, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಭುಗೌಡ ಪಾಟೀಲ್, ವಕ್ತಾರ ವೀರಣ್ಣ ಹುಬ್ಬಳ್ಳಿ, ಲಕ್ಷ್ಮಣ್ ಕಾಳಿ, ಕರಬಸಯ್ಯ ಬಿನ್ನಾಳ್, ವಸಂತ್ ಭಾವಿಮನಿ, ಕಲ್ಲೇಶ್ ಕರಮುಡಿ, ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

error: Content is protected !!