ನಾಳೆ ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆ, ಕೊಪ್ಪಳ, ಬಳ್ಳಾರಿ ಗೆಲುವು ಮತ್ತಷ್ಟು ಸಲೀಸು?

ನಾಳೆ ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆ, ಕೊಪ್ಪಳ, ಬಳ್ಳಾರಿ ಗೆಲುವು ಮತ್ತಷ್ಟು ಸಲೀಸು?

ಮಾಜಿ ಸಚಿವ ಕೆ ಆರ್ ಪಿ  ಪಿ ಪಕ್ಷದ ಶಾಸಕ, ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ನಾಳೆ ಸೋಮವಾರ ಮಾರ್ಚ್ 25 ರಂದು ಮರಳಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಇಂದು ಬೆಂಗಳೂರಿನ ಜನಾರ್ಧನ್ ರೆಡ್ಡಿ ನಿವಾಸದಲ್ಲಿ ನಡೆದ ಕೆ ಆರ್ ಪಿ ಪಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ಜೊತೆ KRPP ಪಕ್ಷ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆ ಜನಾರ್ಧನ್ ರೆಡ್ಡಿ ಅವರು ನಾಳೆ ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ 10 ಗಂಟೆಗೆ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.

ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷ ಸೇರ್ಪಡೆ ಸುದ್ದಿ ಕಳೆದೆರಡು ತಿಂಗಳಿಂದ ಕೇಳಿ ಬರುತ್ತಿತ್ತು. ಒಂದು ವಾರದ ಹಿಂದೆ ಅಮಿತ್ ಶಾಹ ಅವರನ್ನು ಭೇಟಿಯಾಗಿ ಬಂದಿದ್ದ ರೆಡ್ಡಿ ಬಿಜೆಪಿ ಸೇರುವ ಕುರಿತು ಇಂದು ಸಭೆ ನಡೆಸಿದ್ದು ಒಮ್ಮತದ ನಿರ್ಧಾರದ ಮೂಲಕ ಮತ್ತೆ ಬಿಜೆಪಿ ಸೇರುತ್ತಿದ್ದಾರೆ.

ಜನಾರ್ಧನ್ ರೆಡ್ಡಿ ಪಕ್ಷ ಸೇರ್ಪಡೆಯಿಂದ ಬಳ್ಳಾರಿ, ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಮತ್ತಷ್ಟು ಸಲೀಸು ಆಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

:: ಪ್ರಜಾವೀಕ್ಷಣೆ ಸುದ್ದಿ ಜಾಲ

Prajavikshane

Chandru R Bhanapaur

Leave a Reply

error: Content is protected !!