LOCAL NEWS : ಗಣೇಶ ಚತುರ್ಥಿ ಶಾಂತಿ ಸಭೆ : ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ಇಲ್ಲ, ನಿಯಮ ಉಲ್ಲಂಘನೆ ಆದಲ್ಲಿ ಕಾನೂನು ಕ್ರಮ!

You are currently viewing LOCAL NEWS : ಗಣೇಶ ಚತುರ್ಥಿ ಶಾಂತಿ ಸಭೆ : ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ಇಲ್ಲ, ನಿಯಮ ಉಲ್ಲಂಘನೆ ಆದಲ್ಲಿ ಕಾನೂನು ಕ್ರಮ!
  • ಮುಂದಿನ ತಿಂಗಳು ಸಪ್ಟಂಬರ್ 7ರಂದು ಗಣೇಶ ಚತುರ್ಥಿಯ ಪ್ರಯುಕ್ತ ವಿನಾಯಕನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.

  •  ಈದ್ ಮಿಲಾದ್ ಹಬ್ಬವು ಸಪ್ಟಂಬರ್ 16ರಂದು ಆಚರಿಸಲಾಗುತ್ತದೆ.

  •  ಕುಕುನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಗೆ ಅನುಮತಿ ನೀಡಲಾಗುವುದಿಲ್ಲ.

  •  ಈ ನಿಯಮವನ್ನ ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ  ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು.

ಕುಕನೂರು : ಗಣೇಶನ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕುಕನೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

ನಿನ್ನೆ ಸೋಮವಾರ ಸಂಜೆ 6:30ಕ್ಕೆ ಪೊಲೀಸ್ ಠಾಣಾ ಆವರಣದಲ್ಲಿ  ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಟಿ ಗುರುರಾಜ್, ‘ ಕುಕನೂರು ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಅದೇ ರೀತಿ ಸಪ್ಟಂಬರ್ 15-16 ರಂದು ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬವು ಇರುವುದರಿಂದ, ಯಾವುದೇ ರೀತಿ ಕೋಮು ಗಲಭೆಯಾಗದಂತೆ, ಸೌಹಾರ್ದಯುತವಾಗಿ ಈ ಎರಡು ಹಬ್ಬವನ್ನು ಆಚರಣೆ ಮಾಡಬೇಕು  ಎಂದು ಹೇಳಿದರು.

ವಿಶೇಷವಾಗಿ ಸೆ. 15 ಮತ್ತು 16 ರಂದು ಈದ್ ಮಿಲಾದ್ ಹಬ್ಬ ಇರುವ ಕಾರಣ 11ನೇ ದಿನ ಗಣೇಶನ ಮೂರ್ತಿ ವಿಸರ್ಜನೆಯನ್ನು  7ನೇ ದಿನ ಹಾಗೂ 9ನೇ ದಿನದಂದು ನೆರವೇರಿಸಬೇಕು. ಗಣೇಶನ ವಿಸರ್ಜನೆ ವೇಳೆ  ಡಿಜೆ ಸಾಂಗ್ ಸಿಸ್ಟಮ್‌ಗೆ ಯಾವುದೇ ಪರವಾನಿಗೆ ಇರುವುದಿಲ್ಲ, ಕಾನೂನಿನ ಚೌಕಟ್ಟಿನಲ್ಲಿ  ಹಬ್ಬ ಆಚರಣೆ ಮಾಡಬೇಕು  ಒಂದು ವೇಳೆ ನಿಯಮ ಉಲ್ಲಂಘನೆ ಆದರೆ ಯಾರೇ ಇರಲಿ? ನಿರ್ದಾಕ್ಷಣ್ಯವಾಗಿ  ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವೀಕ್ಷಣೆ ಸುದ್ದಿ ಜಾಲ 

Leave a Reply

error: Content is protected !!