JOB ALERT : ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ..!

You are currently viewing JOB ALERT : ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ..!

ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿಗೆ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ) : ಹೊಸಪೇಟೆಯ ಹರಿಹರ ರಸ್ತೆ ಮರಿಯಮ್ಮನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿ.ಟಿ.ಮತ್ತು ಟಿ.ಸಿ.) 2024-25 ನೇ ಸಾಲಿನ ಅಲ್ಪಾವದಿ ತರಬೇತಿಗಳಾದ ಟೂಲ್ ರೂಂ ಮಷಿನಿಸ್ಟ್, ಸಿಎನ್‌ಸಿ ಟೆಕ್ನಾಲಜಿಸ್ಟ್, ರೊಬೊಟಿಕ್ ಟೆಕ್ನಾಲಜಿಸ್ಟ್, ಎಲೆಕ್ಟಿçಕಲ್ ಇನ್‌ಸ್ಟಾಲೆಷನ್ ಲ್ಯಾಬ್, ಎಲೆಕ್ಟಿçಕಲ್ ವೈರಿಂಗ್‌ಲ್ಯಾಬ್, ಪಿಎಲ್‌ಸಿ ಪ್ರೋಗ್ರಾಮಿಂಗ್ ಲ್ಯಾಬ್, ಬೇಸಿಕ್ ಎಲೆಕ್ಟಾçನಿಕ್ಸ್ ಲ್ಯಾಬ್, ಟರ್ನರ್, ಮಿಲ್ಲರ್, ಗ್ರಿಂಡರ್, ಫಿಟ್ಟರ್, ಕ್ಯಾಡ್, ಕ್ಯಾಮ್ (ಆಟೋ ಕ್ಯಾಡ್, ಮಾಸ್ಟರ್ ಕ್ಯಾಮ್, ಸಾಲಿಡ್ ವರ್ಕ್ಸ್, ಪ್ರೋ-ಇ, ಯೂನಿ ಗ್ರಾಫಿಕ್ಸ್ ಮತ್ತು ಕ್ಯಾಟಿಯಾ) ಕೋರ್ಸ್ಗಳಿಗೆ, ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮ ಪಾಸ್/ಫೇಲ್ ಮತ್ತು ಬಿ.ಇ. ಓದುತ್ತಿರುವ ಪಾಸಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, (ಜಿ.ಟಿ.ಮತ್ತು ಟಿ.ಸಿ.) ಹೊಸಪೇಟೆ ಇವರನ್ನು ಖುದ್ದಾಗಿ ಅಥವಾ ಮೊ.ಸಂ.:8722999929, 7795969915, 9845416198ಗೆ ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನವಾಗಿರುತ್ತದೆ ಎಂದು ಮರಿಯಮ್ಮನಹಳ್ಳಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿ.ಟಿ. ಮತ್ತು ಟಿ.ಸಿ.) ರಾಜ್ಯಮಟ್ಟದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದು ಜಾಗತಿಕ ಮಟ್ಟದಲ್ಲಿ ಪ್ರಸಂಶೆಗೊಳಪಟ್ಟ ಸಂಸ್ಥೆಯಾಗಿದೆ. ನೇಕ ವರ್ಷಗಳಿಂದ ಉನ್ನತ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕ್ಶೆಗಾರಿಕಾ ರಂಗದಲ್ಲಿ ಇಂದಿನ ಪ್ರಮುಖ ಕೊರತೆಯಾಗಿರುವ ನುರಿತ ಮಾನವ ಸಂಪನ್ಮೂಲಗಳನ್ನು ಒದಗಿಸಲು ಶಕ್ತವಾಗಿರುವ ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಸಂಸ್ಥೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

 
ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ) : 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮರಿಯಮ್ಮನಹಳ್ಳಿಯಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಗಣಿತ, ಸಮಾಜ ವಿಜ್ಞಾನ ಶಿಕ್ಷಕರು ಬೇಕಾಗಿದ್ದು, ಆಸಕ್ತಿ ಇದ್ದಂತಹ ಅಭ್ಯರ್ಥಿಗಳು ನಿಗದಿತ ಪದವಿ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9964732718ಗೆ ಸಂಪರ್ಕಿಸಬಹುದಾಗಿದೆ ಎಂದು ಮರಿಯಮ್ಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡುಗೆ ಸಹಾಯಕರು, ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ) : 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮರಿಯಮ್ಮನಹಳ್ಳಿಯಲ್ಲಿ ಅಡುಗೆ ಸಹಾಯಕರು ಮತ್ತು ಜವಾನ ನೇಮಕಾತಿಯನ್ನ ಗೌರವಧನದ ಆಧಾರದ ಮೇಲೆ ಮಾಡಿಕೊಳ್ಳಲಾಗುತ್ತಿದೆ.

ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದು,್ದ ಅನುಭವ ಇರುವಂತಹ ಅಡುಗೆ ಸಹಾಯಕರು ಮತ್ತು ಜವಾನರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: 9964732718ಗೆ ಸಂಪರ್ಕಿಸಬಹುದಾಗಿದೆ ಎಂದು ಮರಿಯಮ್ಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಿಯಮ್ಮನಹಳ್ಳಿ ಶಾಲೆಗೆ ಬಾಡಿಗೆ ಕಟ್ಟಡ ಕೋರಿ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ) : 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮರಿಯಮ್ಮನಹಳ್ಳಿಗೆ ಮರಿಯಮ್ಮನಹಳ್ಳಿಯಲ್ಲಿ ಬಾಡಿಗೆ ಕಟ್ಟಡ ಬೇಕಿರುತ್ತದೆ.

ಮರಿಯಮ್ಮನಹಳ್ಳಿಯಲ್ಲಿ ವಸತಿ ಶಾಲೆ ಪ್ರಾರಂಭಿಸಲು ಸೂಕ್ತ ವಾತಾವರಣ ಹಾಗೂ ಕಟ್ಟಡವಿದ್ದಲ್ಲಿ ಬಾಡಿಗೆ ಪಡೆಯಲಾಗುವುದು. ಅಂತಹ ಕಟ್ಟಡ ಹೊಂದಿದ ಕಟ್ಟಡ ಮಾಲೀಕರು ವಸತಿ ಶಾಲೆಗೆ ಕಟ್ಟಡ ಬಾಡಿಗೆ ನೀಡಲು ಇಚ್ಛಿಸಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ:9964732718ಗೆ ಸಂಪರ್ಕಿಸಬಹುದಾಗಿದೆ ಎಂದು ಮರಿಯಮ್ಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!