Post Views: 218
LOCAL NEWS : ವಿಜೃಂಭಣೆಯಿಂದ ನೆರವೇರಿದ 108 ಕುಂಭ ಮೆರವಣಿಗೆ ಕಾರ್ಯಕ್ರಮ
ಕುಕನೂರು : ತಾಲೂಕಿನ ಆಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಗ್ರಾಮದಲ್ಲಿ ವಿಜೃಂಭಣೆಯಿಂದ ಸಮಂಗಳೆಯರಿಂದ 108 ಕುಂಬೋತ್ಸವ ಮೆರವಣಿಗೆ ಆಯೋಜಿಸಲಾಯಿತು.
ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವೀರಭದ್ರೇಶ್ವರನಿಗೆ ಮಹಾ ರುದ್ರಾಭಿಷೇಕ ಜೊತೆಗೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಸಾಯಂಕಾಲ ನಂತರ ಶ್ರೀ ವೀರಭದ್ರೇಶ್ವರ ಮಹಾ ಕಾರ್ತಿಕೋತ್ಸವ ಆಯೋಜಿಸಲಾಗಿದೆ ಎಂದು ಹಾಗೂ ಬುಧವಾರ ಬೆಳಗ್ಗೆ ಮಹಾರುದ್ರಾಭಿಷೇಕ ನಂತರ ಪುರವಂತಿಕೆಯೊಂದಿಗೆ ಪಲ್ಲಕ್ಕಿ ಉತ್ಸವ, ಕೊಣ್ಣೂರು ಹಾಗೂ ಕಡಕೋಳ ಉತ್ಸವ, ಶ್ರೀ ವೀರಭದ್ರೇಶ್ವರ ಹಾಗೂ ಕಲ್ಲಿನಾಥೇಶ್ವರ ಭಜನಾ ಸಂಘದ ವತಿಯಿಂದ ಉತ್ಸವಗಳನ್ನು ನೆರವೇರಿಸಲಾಗುವುದು ನಂತರ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆಯ ಮಹಾದಾಸೋಹ ಕಾರ್ಯಕ್ರಮ, ಸಾಯಂಕಾಲ 4:00ಗೆ ಮಹಾರಥೋತ್ಸವ ವಿವಿಧ ಮಠಾಧೀಶರಿಂದ ಚಾಲನೆ ಗೊಳಿಸಲಾಗುವುದು. ಸಾಯಂಕಾಲ 7:00ಗೆ ಪುರಾಣ ಮಹಾಮಂಗಲ ಕಾರ್ಯಕ್ರಮ ನೆರವೇರಿಸಲಾಗುವುದು.
ದಿನಾಂಕ 5.12.2024ರ ಗುರುವಾರ ಸಾಯಂಕಾಲ ಕಡುಬಿನ ಕಾಳಗ ಕಾರ್ಯಕ್ರಮ ಆಯೋಜಿಸಲಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.