LOCAL NEWS : ವಾಲ್ಮೀಕಿ ಆಶ್ರಮ ಶಾಲೆಗೆ ಲೋಕಾಯುಕ್ತರು ಬೇಟಿ : ವ್ಯವಸ್ಥೆ ಕಂಡು ಕೆಂಡಮಂಡಲಾದ ಅಧಿಕಾರಿಗಳು..!!

You are currently viewing LOCAL NEWS : ವಾಲ್ಮೀಕಿ ಆಶ್ರಮ ಶಾಲೆಗೆ ಲೋಕಾಯುಕ್ತರು ಬೇಟಿ : ವ್ಯವಸ್ಥೆ ಕಂಡು ಕೆಂಡಮಂಡಲಾದ ಅಧಿಕಾರಿಗಳು..!!

LOCAL NEWS : ವಾಲ್ಮೀಕಿ ಆಶ್ರಮ ಶಾಲೆಗೆ ಲೋಕಾಯುಕ್ತರು ಬೇಟಿ : ವ್ಯವಸ್ಥೆ ಕಂಡು ಕೆಂಡಮಂಡಲಾದ ಅಧಿಕಾರಿಗಳು..!!

ಶಿರಹಟ್ಟಿ : ತಾಲೂಕು ನವೆಭಾವನೂರು ಗ್ರಾಮದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿಯುತ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಗೆ ಗದಗ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದರು.

ಅಲ್ಲಿನ ನ್ಯೂನತೆಕೊಂಡು ಲೋಕಾಯುಕ್ತ ಅಧಿಕಾರಿಗಳು ಕೆಂಡಮಂಡಲರಾದರು. ಶಾಲೆಯ ಒಂದು ಕೊಠಡಿಯಲ್ಲಿ ಹಾಗೂ ನಿಲಯ ಪಾಲಕರ ಒಂದು ಕೊಠಡಿಯಲ್ಲಿ ಮಕ್ಕಳಿಗೆ ವಿತರಿಸಲು ಸರ್ಕಾರದಿಂದ ಮಂಜೂರಾದ ಸಾಮಗ್ರಿಗಳು ಅಲ್ಲೇ ಬಿದ್ದಿದ್ದನ್ನು ಕಂಡು ನಿಲಯಪಾಲಕರಿಗೆ ತರಾಟೆಗೆ ತೆಗೆದುಕೊಂಡರು.

ಶಾಲೆಯಲ್ಲಿ ಒಟ್ಟು ಐದು ಜನ ಖಾಯಂ ಶಿಕ್ಷಕರು ಇರಬೇಕು ಆದರೆ ಐದು ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ನಿಲಯ ಪಾಲಕರು ಹಾಗೂ ಮುಖ್ಯ ಶಿಕ್ಷಕರು ಒಬ್ಬರೇ ಇರುವುದರಿಂದ ಮಕ್ಕಳ ಮೇಲೆ ಹೆಚ್ಚು ಗಮನಹರಿಸಲಾಗುತ್ತಿಲ್ಲ. ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಇಡ್ಲಿ ಹಾಗೂ ಚಪಾತಿ ಮಾಡುವ ಮಷೀನ್ ಇದ್ದು, ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು. 

ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದನ್ನು ಅಳವಡಿಸಿಲ್ಲ. ಮಕ್ಕಳಿಗೆ ಹೊರಗಡೆಯಿಂದ ಕೊಳಕು ಕ್ಯಾಾನಿನಲ್ಲಿ ನೀರನ್ನು ತಂದು ಇಟ್ಟಿರುತ್ತಾರೆ. ಸರ್ಕಾರದಿಂದ ಮಂಜೂರಾದ ಊಟದ ತಟ್ಟೆ ಹಾಗೂ ಗ್ಲಾಸ್ ಗಳನ್ನು ಮಕ್ಕಳಿಗೆ ನೀಡಿರುವುದಿಲ್ಲ. ದಾಸ್ತಾನು ಕೂಡಡಿಯಲ್ಲಿರುವ ಅಕ್ಕಿ ಚೀಲಗಳಲ್ಲಿ ಇಲಿಗಳು ಓಡಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಲಿ ಹಿಕ್ಕೆಗಳು ಕಂಡು ಬಂದಿರುತ್ತದೆ.

ವಿದ್ಯಾರ್ಥಿಗಳ ಯಾವುದೇ ಕೊಠಡಿಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಫ್ಯಾನ್ ಸೊಳ್ಳೆ ನಿಯಂತ್ರಕ ಹಾಗೂ ಕಿಟಕಿಗಳಿಗೆ ಸೊಳ್ಳೆ ಪರದೆಗಳು ಇರುವುದಿಲ್ಲ. ಶೌಚಾಲಯ ಹಾಗೂ ಸ್ನಾನದ ಗೃಹಗಳು ತುಂಬಾ ಗಲೀಜು ಆಗಿದ್ದು ಸ್ವಚ್ಛತೆ ಇರುವುದಿಲ್ಲ. ಸ್ನಾನಗೃಹ ಇರುವ ನಲ್ಲಿಗಳಲ್ಲಿ ನೀರು ಬರುವುದಿಲ್ಲ ವಿದ್ಯಾರ್ಥಿಗಳು ಸೌಚಾಲಯದಿಂದ ನೀರು ತಂದು ಸ್ನಾನ ಮಾಡುವುದಾಗಿ ತಿಳಿಸಿರುತ್ತಾರೆ. ವಸತಿ ನಿಲಯದ ಅಡುಗೆ ಕೋಣೆ ಹಾಗೂ ವಿದ್ಯಾರ್ಥಿಗಳ ಕೋಣೆ ಮಕ್ಕಳೇ ಸ್ವಚ್ಛ ಮಾಡುತ್ತಿದ್ದು ಮಕ್ಕಳು ಮಾಡದಿದ್ದರೆ ಅಡುಗೆಯವರು ಹೊಡೆಯುತ್ತಾರೆ ಎಂದು ಮಕ್ಕಳು ತಿಳಿಸಿರುತ್ತಾರೆ.

ಎರಡು ವಾಷಿಂಗ್ ಮಷೀನ್ ಇದ್ದರೂ ಒಂದು ದುರಸ್ತಿಯಲ್ಲಿದೆ. ಮಕ್ಕಳ ಬಟ್ಟೆ ಸರಿಯಾಗಿ ತೊಳೆಯದ ಕಾರಣ ಅದರಿಂದ ದುರ್ವಾಸನೆ ಬರುತ್ತಿದೆ. ಶಾಲೆಯ ಕೋಠಡಿಗಳನ್ನು ಪ್ರತಿದಿನ ಸ್ವಚ್ಛ ಮಾಡುವುದಿಲ್ಲ. ಅಡುಗೆ ಮನೆ ಪಕ್ಕದಲ್ಲಿ ಡ್ರೈನೇಜ್ ಹೋಗುವ ಪೈಪ್ ಬ್ಲಾಕ್ ಆಗಿದ್ದು ಡ್ರೈನೇಜ್ ಲೀಕ್ ಆಗಿ ಬಯಲು ಜಾಗದಲ್ಲಿ ನಿಂತು ತುಂಬಾ ದುರ್ವಾಸನೆ ಬರುತ್ತದೆ. ಶಾಲೆಯ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇರುವುದಿಲ್ಲ.

ಹೀಗೆ ಹಲವಾರು ನ್ಯೂಯತೆಗಳನ್ನು ಕಂಡ ಲೋಕಾಯುಕ್ತರು ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಿ ಮಕ್ಕಳಿಗೆ ರುಚಿ ಹಾಗೂ ಶುಚಿತ್ವದ ಆಹಾರ ಪೂರೈಸಬೇಕು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಾಕಿತ್ತು ಮಾಡಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಶ್ರೀಮತಿ ಎಸ್ ಎಸ್ ತೇಲಿ, ಶ್ರೀಮತಿ ಬಿ ಎಸ್ ಜವಳಿ, ಆರ.ಎಮ್. ಹಳ್ಳಳ್ಳಿ ಮುಂತಾದವರು ಉಪಸ್ಥಿತರಿದ್ದರು.

 ವರದಿ: ವೀರೇಶ್ ಗುಗರಿ

Leave a Reply

error: Content is protected !!