BREAKING : ಕೊಪ್ಪಳ ಆರ್ ಟಿ ಓ ಕಛೇರಿ ಮೇಲೆ ಲೋಕಾಯುಕ್ತ ದಾಳಿ..!!
ಕೊಪ್ಪಳ : ನಗರದ ಆರ್ ಟಿ ಓ ಕಾರ್ಯಾಲಯದ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ವಿಲೇವಾರಿಯಾಗದೆ ಇರುವ ಕಡತಗಳನ್ನು ನೋಡಿ ಕರೆಯಲದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಶುಕ್ರವಾರ ಜರುಗಿತು.
ಕೊಪ್ಪಳ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಕಾರಿಗಳ ಕಾರ್ಯಾಲಯದಲ್ಲಿ ನಿರಂತರವಾಗಿ ಕೆಲಸದ ವಿಳಂಬ, ಮಧ್ಯವರ್ತಿಗಳ ಹಾವಳಿ ಹಾಗೂ ಹಣದ ಬೇಡಿಕೆಯ ಆರೋಪ ಸಾರ್ವಜನಿಕರಿಂದ ಪದೇಪದೇ ಕೇಳಿ ಬರುತ್ತಿದ್ದು ಈ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಕಾರ್ಯಾಲಯದಲ್ಲಿ ದಾಳಿ ನಡೆಸಿದ್ದು ವಿಲೇವಾರಿ ಗೊಳ್ಳದೆ ಕಚೇರಿಯಲ್ಲಿಯೇ ಇದ್ದ ಬಾಕ್ಸ್ ಗಟ್ಟಲೆ ಡ್ರೈವಿಂಗ್ ಲೈಸೆನ್ಸ್ ಕಾರ್ಡುಗಳನ್ನು ಕಂಡು ಆಶ್ಚರ್ಯ ಚಕಿತರಾದರು.
ಬಾಕ್ಸ್ ಗಟ್ಟಲೆ ಇದ್ದ ಡ್ರೈವಿಂಗ್ ಲೈಸೆನ್ಸ್ ಅನ್ನು ಕಂಡು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಈ ಲೈಸೆನ್ಸ್ ಕಾರ್ಡುಗಳ ವಿಲೇವಾರಿಗೆ ವಿಳಂಬವಾಗಿರುವ ಕಾರಣಗಳನ್ನು ಕೇಳಿ ತರಾಟೆಗೆ ತೆಗೆದುಕೊಂಡಿದ್ದು ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ನೀಡಬೇಕು ಹಾಗೂ ಸೂಕ್ತ ಸಮಯದಲ್ಲಿ ಕಡತಗಳ ವಿನಯವರಿಯಾಗಬೇಕು ಎಂದು ಸೂಚನೆ ನೀಡಿರುತ್ತಾರೆ.