LOCAL NEWS : ನಾಳೆ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವ
ಕುಕನೂರ : ನಾಳೆ ಪಟ್ಟಣದ ಅಂಬೇಡ್ಕರ್ ಕಾಲೋನಿಯ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗಾಳೆಮ್ಮ ದೇವಿಯ ಅಗ್ನಿಕುಂಡ ಇಂದು ರಾತ್ರೀ 10 ಗಂಟೆಗೆ ನಿರ್ಮಾಣ ಮಾಡುವುದು, ತದನಂತರ 11.45 ಕ್ಕೇ ಹೂ ಮಾಲೆ ಗೆ ಹೋಗಿ ದೇವಿಗೆ ವಿಶೇಷ ಅಲಂಕಾರ ಮಾಡಿ ಮರುದಿನ ರವಿವಾರ ಬೆಳಿಗ್ಗೆ 5.30 ಗಂಟೆಗೆ ಹೊಳಿಗೆ ಹೋಗಿ ಗಂಗಾ ಪೂಜೆ ನೆರವೇರಿಸಲಾಗುವುದು.
7.30 ಗಂಟೆಗೆ ಅಗ್ನಿಪ್ರವೇಶ ಜರುಗುವುದು.ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನೆರವೇರುವುದು. ಸಾಯಂಕಾಲ 6.30 ಗಂಟೆಗೆ ಮರಿ ಹೊಳಿಗೆ ಹೋಗುವುದು ಸಂಜೆ ದೇವಿಯ ಮೂರ್ತಿಯ ಮೆರವಣಿಗೆಯನ್ನು ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ನಡೆಯುವುದು.
ಜಾತ್ರೆಯಲ್ಲಿ ಸಕಲ ಸದ್ಧಭಕ್ತಾದಿಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವದ ಕಮಿಟಿಯ ಮುಖಂಡರಾದ ಶಿವಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ಪ್ರಶಾಂತ್ ಆರುಬೆರಳಿನ್, ಅಂದಪ್ಪ ಭಂಡಾರಿ, ಚಂದ್ರಪ್ಪ ಆರುಬೆರಳಿನ್, ನಿಂಗಪ್ಪ ಗೊರ್ಲೆಕೊಪ್ಪ, ಪರುಶುರಾಮ ಸಕ್ರಣ್ಣವರ, ರಮೇಶ್ ಶಾಸ್ತ್ರಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಭೀಮಣ್ಣ ಗುಡದಳ್ಳಿ, ಲಕ್ಷ್ಮಣ ಬಾರಿಗಿಡದ, ಶ್ರೀಧರ್ ಭಂಡಾರಿ, ಹನುಮಂತ ಆರುಬೆರಳಿನ್, ನಿಂಗರಾಜ ಅಣ್ಣಿಗೇರಿ, ಶೇಖಪ್ಪ ಗೋರ್ಲೆಕೋಪ್ಪ, ಇತರರು ಪ್ರಕಟಣೆಯಲ್ಲಿ ಕೋರಿದ್ದಾರೆ.