ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಬೇಡಿಕೆ : ತಹಸೀಲ್ದಾರ್ ಆಶ್ವಾಸನೆ ಈಡೇರಿಕೆಗೆ ಮನವಿ

ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಬೇಡಿಕೆ : ತಹಸೀಲ್ದಾರ್ ಆಶ್ವಾಸನೆ ಈಡೇರಿಕೆಗೆ ಮನವಿ


ಕುಕನೂರು : ತಾಲೂಕಿನ ದ್ಯಾಂಪೂರು ಗ್ರಾಮಕ್ಕೆ ರುದ್ರಭೂಮಿ ಒದಗಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಆಗಿನ ತಹಸೀಲ್ದಾರ್ ಅವರು ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಅಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರುದ್ರಭೂಮಿ ಮಂಜೂರಾತಿ ಅಗ್ರಹಿಸಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಬಹಿಸ್ಕರಿಸಲು ಗ್ರಾಮಸ್ಥರು ಮುಂದಾಗಿದ್ದರು. ತಹಸೀಲ್ದಾರ್ ಅವರ ಮಧ್ಯಪ್ರವೇಶದಿಂದ ಗ್ರಾಮಸ್ಥರು ಬಹಿಸ್ಕಾರ ಹಿಂದೆ ಪಡೆದಿದ್ದರು.

ಆದರೆ ಇದುವರೆಗೂ ಯಾವುದೇ ರೀತಿಯಲ್ಲಿ ರುದ್ರಭೂಮಿಗೆ ಭೂ ಸ್ವಾಧೀನ ಸಹ ಆಗಿಲ್ಲ. ಕೂಡಲೇ ತಹಸೀಲ್ದಾರರು ಗ್ರಾಮಕ್ಕೆ 2 ಎಕರೆ ರುದ್ರಭೂಮಿ ಒದಗಿಸಿಕೊಡಬೇಕು ಎಂದು ಗ್ರಾಮದ ಎಸ್ ಸಿ ಕಾಲೋನಿಯ ಪ್ರಮುಖರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
.
ಗ್ರಾಮಸ್ಥರಾದ ಚಂದಾಲಿಂಗಪ್ಪ ಮಾಲಗಿತ್ತಿ, ದೇವಪ್ಪ ದೇವರಮನಿ, ಚಂದ್ರಕಾಂತ ದೊಡ್ಡಮನಿ, ಶಿವಪ್ಪ ದೇವರಮನಿ, ಫಕೀರಪ್ಪ ಭಾವಿಮನಿ, ಜಗದೀಶ ತೊಂಡಿಹಾಳ, ದುರುಗಪ್ಪ ಅಲವಾಗಲಿ, ಬಾಲಪ್ಪ ಬಳಗೇರಿ, ಗಿರಿಯಪ್ಪ ಹಲವಾಗಲಿ, ಹನುಮಪ್ಪ ಹಿರೇಕೊಪ್ಪ, ಹುಲ್ಲಪ್ಪ ಬಳಗೇರಿ ಇತರರಿದ್ದರು.

Leave a Reply

error: Content is protected !!