ಕುಕನೂರು : ಇಂದು “ಕುಕನೂರು ಬಂದ್” ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಮೂಲಕ “ಕುಕನೂರು ಬಂದ್” ಯಶಸ್ವಿಗೊಂಡಿದೆ.
ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ ಸಂಕೀರ್ಣ, ಬುದ್ಧ ಬಸವ ಅಂಬೇಡ್ಕರ ಭವನ ಕಟ್ಟಡಗಳು ಕುಕನೂರು ಪಟ್ಟಣ ವ್ಯಾಪ್ತಿಯ ಸರಕಾರಿ ಜಾಗೆಯಲ್ಲಿಯೇ ನಿರ್ಮಿಸಲು ಒತ್ತಾಯಿಸಿ ಇಂದು (ಬುಧವಾರ 11-10-2023)”ಕುಕನೂರ ಬಂದ್” ಅನ್ನು ಕುಕನೂರು ತಾಲೂಕಿನ ನಾಗರಿಕರಿಂದ ಕರೆ ನೀಡಲಾಗಿದೆ.
ಪಟ್ಟಣದ ಕೋಳಿಪೇಟೆಯ ರಾಗಪ್ಪ ಅಜ್ಜನ ಮಠದಿಂದ ಅಂಬೇಡ್ಕರ್ ವೃತ್ತದ ಮೂಲಕ ನಗರ ಹೃದಯ ಭಾಗವಾದ ಶಿರೂರು ವೀರಭದ್ರಪ್ಪ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮಾಡಲಾಯಿತು. ಇದೇ ವೇಳೆಯಲ್ಲಿ ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ “ಕುಕನೂರು ಬಂದ್” ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕಾ ಅಧ್ಯಕ್ಷ ರಾಘವೇಂದ್ರ ಕಾತರಕಿ, “ತಾಲೂಕು ಆಡಳಿತ ಕಛೇರಿ, ತಾಲೂಕಾ ಕ್ರೀಡಾಂಗಣ, ತಾಲೂಕ ನ್ಯಾಯಾಲಯ ಸಂಕೀರ್ಣ, ಬುದ್ಧ ಬಸವ ಅಂಬೇಡ್ಕರ ಭವನ ಕಟ್ಟಡಗಳು ಕುಕನೂರು ಪಟ್ಟಣ ವ್ಯಾಪ್ತಿಯ ಸರಕಾರಿ ಜಾಗೆಯಲ್ಲಿಯೇ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಪಟ್ಟಣದ ವ್ಯಾಪ್ತಿ ಬಿಟ್ಟು ಬೇರೆಡೆಗೆ ನಿರ್ಮಿಸಲು ನಾವು ಬಿಡುವುದಿಲ್ಲ, ಬೇರೆಡೆಗೆ ತಾಲೂಕಾ ಆಡಳಿತ ಕಚೇರಿ ಆದ್ರೆ, ಸಾರ್ವಜನಿಕರಿಗೆ ಸಾರಿಗೆ ತೊಂದರೆ ಆಗಲಿದೆ. ಇಲ್ಲೇ ಇರುವ ಸರ್ಕಾರದ ಜಮೀನಿನಲ್ಲಿ ಮಾಡಬೇಕು”, ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರದ ಜೆಮಿನಿ ಎಷ್ಟಿವೆ ಎಂದು ಸರ್ವೇ ಮಾಡಿಸಿ ಯಾರದು ಮುಲಾಜಿ ಇಲ್ಲದೆ ಆಡಳಿತ ಕಚೇರಿ ನಿರ್ಮಾಣ ಮಾಡಬೇಕು, ಆದಷ್ಟು ಬೇಗ ತಾಲೂಕ ಆಡಳಿತ ಕಟ್ಟಡಗಳು ಆಗದಿದ್ದರೆ, ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ಶಾಸಕರಿಗೆ ಆಗ್ರಹಿಸಿದರು.
“ಕುಕನೂರು ಪಟ್ಟಣ ವ್ಯಾಪ್ತಿಯಲ್ಲಿಯೇ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಕ್ರೀಡಾಂಗಣ, ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣ ಆಗತಕ್ಕದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಕಟ್ಟಡಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ಮಾಡಬೇಕು, ಕೆಲವರು ಸರ್ಕಾರಿ ಭೂಮಿಯಲ್ಲಿ ನಿರ್ಮಾಣ ಮಾಡಲು ಮುಂದಾದಾಗ ತಕರಾರು ಮಾಡುತ್ತಿದ್ದಾರೆ ಅಂತವರ ಮಾತಿಗೆ ತಲೆ ಕೆಡಿಸಿಕೊಳ್ಳದೇ, ಸಾರ್ವಜನಿಕರ ಹಿತ ದೃಷ್ಟಿಯಿಂದ ಕುಕುನೂರು ತಾಲೂಕ ಕೇಂದ್ರದ ವ್ಯಾಪ್ತಿಯಲ್ಲಿ ಆಡಳಿತ ಕಚೇರಿ ನಿರ್ಮಾಣವಾದರೆ ಒಳ್ಳೆಯದು, ಈಗಾಗಲೇ ಕುಕುನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಇದ್ದು, ಅದೇ ಭೂಮಿಯಲ್ಲಿ ಸರ್ಕಾರಿ ಕಟ್ಟಡಗಳು ನಿರ್ಮಾಣ ಆಗಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಹಾಲಿ ಶಾಸಕರಿಗೆ ಒತ್ತಾಯ ಮಾಡುತ್ತಿದ್ದೇವೆ” ಎಂದು ಹಿರಿಯ ವರ್ತಕರ ಹಾಗೂ ಹಿರಿಯ ಮುಖಂಡ ಸಿದ್ದಯ್ಯ ಕಳ್ಳಿಮಠ ಹೇಳಿದರು.
ಇಂದು ಬೆಳಗ್ಗೆ 7 ಗಂಟೆಯಿಂದ ಮದ್ಯಾಹ್ನ 12:30 ಗಂಟೆಯವರೆಗೆ ಕುಕನೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 367 ರ ಅಕ್ಕ ಪಕ್ಕದಲ್ಲಿರುವ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿತ್ತು. ಸಾರಿಗೆ ಬ್ಯಾಂಕ್, ಬಾರ್ ಹಾಗೂ ಮೆಡಿಕಲ್ ಶಾಪ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಗೆ ಸಹಕಾರ ನೀಡಿದ್ದವೆ. ಪಟ್ಟಣದ ಮೆನ್ ಬಜಾರ್, ಅಂಬೇಡ್ಕರ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ಹಾಗೂ ಮಹಾಮಾಯ ತೇರಿನ ಗಡ್ಡೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದಾಗಿತ್ತು.
ಈ ಬಂದ್ ನಲ್ಲಿ ಕುಕನೂರು ತಾಲೂಕಿನ ನಾಗರೀಕರು ಹಾಗೂ 1. ವರ್ತಕರ ಸಂಘ ಕುಕನೂರು, 2. ಕಿರಾಣಿ ವರ್ತಕರ ಸಂಘ ಕುಕನೂರು, 3. ಕುಕನೂರು ವರ್ತಕರ ಕ್ಷೇಮಾಭಿವೃದ್ಧಿ ಸಂಘ. 4. ಕುಕನೂರು ಹಮಾಲರ ಸಂಘ. 5. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಕನೂರು. 6. ಭೀಮ್ ಆರ್ಮಿ ಕುಕನೂರು. 7. ನ್ಯಾಯವಾದಿಗಳ ಸಂಘ ಕುಕನೂರು, 8. ಕಟ್ಟಡ ಕಾರ್ಮಿಕರ ಸಂಘ ಕುಕನೂರು. 9, ಬಾರ್ ಬೆಂಡಿಂಗ್: ಕಾರ್ಮಿಕರ ಸಂಘ ಕುಕನೂರು, 10, ಕರ್ನಾಟಕ ರಕ್ಷಣಾ ವೇದಿಕೆ ಕುಕನೂರು. II. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕುಕನೂರು. 12. ವಿವಿಧ ಗ್ಯಾರೇಜ್ ಒಕ್ಕೂಟ ಕುಕನೂರು. 13. ಮಾಂಸ ವ್ಯಾಪಾರಿಗಳ ಸಂಘ ಕುಕನೂರು. 14. ಕರ್ನಾಟಕ ಚಾಲಕರ ಒಕ್ಕೂಟ ಕುಕನೂರು, 15. ಬೀದಿ ಬದಿ ವ್ಯಾಪಾರಸ್ಥರ ಸಂಘ ಕುಕನೂರು. ಹಾಗೂ ವಿವಿಧ ಸಂಘ ಸಂಸ್ಥೆಗಳು, ರವಿ ನಾಲವಾಡ, ರಾಮಣ್ಣ ಭಜಂತ್ರಿ, ವೀರಯ್ಯ ತೊಂಟದಾರ್ಯಮಠ, ಸಾವಿತ್ರಿ ತಗ್ಗಿನಮನಿ, ಖಾಷಿಂ ಸಾಬ್ ತಾಳಕಲ್, ನೂರ್ ಅಹಮದ್ ಗುಡಿಹಿಂದಲ್, ಚಂದ್ರು ದೊಡ್ಡಮನಿ, ರೈತ ಮುಖಂಡರ ಅಂದಪ್ಪ ಹುರಳಿ, ನಿಂಗಪ್ಪ ಗೊರ್ಲೆಕೊಪ್ಪ, ಶರಣಪ್ಪ ಛಲವಾದಿ, ಯಮನೂರಪ್ಪ ವಡ್ಡರ್ ಮತ್ತು ಕುಕನೂರಿನ ಸಮಸ್ತ ನಾಗರಿಕರು ಭಾಗವಹಿಸಿದ್ದರು.