BREAKING : ಮೇ 11 ರಂದು ಗ್ರಾಮ ಪಂಚಾಯತಿ ಉಪ ಚುನಾವಣೆ : ಮೇ 14 ರಂದು ಫಲಿತಾಂಶ..!
ಪ್ರಜಾ-ವೀಕ್ಷಣೆ ಡಿಜಿಟಲ್ ಡೆಸ್ಕ್ : ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಗೆ ಮೂಹರ್ತ ಪಿಕ್ಸ್ ಮಾಡಿದ್ದು, ಗ್ರಾಮ ಪಂಚಾಯಿತಿ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿದೆ. ಈ ಬಗ್ಗೆ ಏಪ್ರಿಲ್ 22ರಂದು ರಾಜ್ಯ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆ ಪ್ರಕಟಿಸಲಿದೆ.
ಮುಂದಿನ ತಿಂಗಳು ಮೇ 11ರಂದು ಮತದಾನ ನಡೆಯಲಿದ್ದು, ಇದರ ಫಲಿತಾಂಶ ಅದೇ ಮೇ 14ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದ ಒಟ್ಟು 222 ಗ್ರಾಮ ಪಂಚಾಯತಿಗಳ, 260 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ಈ ಹಿನ್ನೆಲೆ ಮೇ 11 ರಂದು ಮತದಾನ ನಡೆಯಲಿ. ಮೇ 14ರಂದು ಗ್ರಾಮ ಪಂಚಾಯಿತಿ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದೆ.