Post Views: 1,205
ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ :
LOCAL BREAKING : ಇಂದಿನಿಂದ ಕುಕನೂರು ಪಟ್ಟಣದಲ್ಲಿ ಬಡವರ ಹಸಿವನ್ನು ನೀಗಿಸುವ ‘ಇಂದಿರಾ ಕ್ಯಾಂಟೀನ್’ ಆರಂಭ..!

ಕುಕನೂರು : ಕುಕನೂರು ಪಟ್ಟಣದಲ್ಲಿ ಇಂದಿನಿಂದ “ಬಡವರ ಮನೆಯ ಊಟ” ‘ಇಂದಿರಾ ಕ್ಯಾಂಟೀನ್’ ಆರಂವಾಗುತ್ತಿದೆ. ಇದರಿಂದ ಅದೇಷ್ಟೋ ಬಡ ಕೂಲಿಕಾರ್ಮಿಕರ ಹಾಗೂ ದಿನಗೂಲಿ ಮಾಡುವ ಕಾರ್ಮಿಕರಿಗೆ ಅನ್ನಪೂರ್ಣೇಶ್ವರಿ ರೂಪದಲ್ಲಿ ದಿನನಿತ್ಯ ಊಟೋಪಚಾರ ನಡೆಯಲಿದೆ.

ಈ ಹಿಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಯಾಗಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಬಡವರ ಹಸಿವನ್ನು ನೀಗಿಸಲು ಸರ್ಕಾರ ರೂಪಿಸಿರುವ ಮಹತ್ತರ ಯೋಜನೆಯಾದ ‘ಇಂದಿರಾ ಕ್ಯಾಂಟೀನ್’ ಆರಂಭಗೊಂಡಿತು.
ಇದರ ನಿಜ ಅರ್ಥದಲ್ಲಿ “ಬಡವರ ಮನೆಯ ಊಟ” ಎಂದೇ ಕರೆಯಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಆಹಾರ ನೀಡುವ ಈ ಯೋಜನೆ ಹಲವರಿಗೆ ಆಶಾದಾಯಕವಾಗಿದೆ. ಇದೀಗ ಕುಕನೂರು ಪಟ್ಟಣದಲ್ಲಿ ಆರಂವಾಗುತ್ತೀರುವುದು ಸಂತಸದ ವಿಚಾರವಾಗಿದೆ. ಇದರಿಂದ ಅದೇಷ್ಟೋ ಬಡ ಕೂಲಿಕಾರ್ಮಿಕರ ಹಾಗೂ ದಿನಗೂಲಿ ಮಾಡುವ ಕಾರ್ಮಿಕರಿಗೆ ಅನ್ನಪೂರ್ಣೇಶ್ವರಿ ರೂಪದಲ್ಲಿ ದಿನನಿತ್ಯ ಊಟೋಪಚಾರ ನಡೆಯಲಿದೆ.
ಇದು ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಶಾಸಕರಾದ ಬಸವರಾಜ ರಾಯರೆಡ್ಡಿಯವರ ಅತೀವ ಕಾಳಜಿವಹಿಸಿ ಕುಕನೂರು ತಾಲೂಕು ಕೇಂದ್ರಕ್ಕೆ “ಬಡವರ ಮನೆಯ ಊಟ” ‘ಇಂದಿರಾ ಕ್ಯಾಂಟೀನ್’ ತಂದಿರುವುದು ನಿಜಕ್ಕೂ ಉತ್ತಮ ಕಾರ್ಯವಾಗಿದೆ.