BREKING NEWS :ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ…..

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ…

ಕೊಪ್ಪಳ . ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ತೊಡಗಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಂತ್ರಗಳನ್ನು ವಶಪಡಿಸಿಕೊಂಡನೀಡಿದ್ದಾರೆ ಅಕ್ರಮ ಮರಳುಗಾರರಿಗೆ ಶಾಕ್ ನೀಡಿದ್ದಾರೆ

ತಾಲೂಕಿನ ಹಿರೇಸಿಂದೋಗಿ ಗ್ರಾಮದ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಿಯಾಜ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡದ ವಿವಿಧ ಅಧಿಕಾರಿಗಳು ದಾಳಿ ಮಾಡಿದ್ದು ಮರಳು ಗಣಿಗಾರಿಕೆ ಕೇಂದ್ರ ಸ್ಥಗಿತಗೊಳಿಸಿದ್ದಾರೆ ಮರಳು ಫಿಲ್ಟರ್ ಗೆ ಬಳಸುತ್ತಿದ್ದ ಯಂತ್ರಗಳನ್ನು ಸಹ ಪಡೆದ ಒಡೆದು ಹಾಕಲಾಗಿದೆ. ಬಹಳ ದಿನಗಳಿಂದ ಹಿರೇಸಿಂದೋಗಿ ಗ್ರಾಮದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವ ಕುರಿತು ಲೋಕಾಯುಕ್ತ ಅಹವಾಲಿನಲ್ಲಿ ದೂರನ್ನು ಸ್ಥಳೀಯರು ಸಲ್ಲಿಸಿದ್ದು ಆ ದೂರಿನ ಅನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಲೋಕಾಯುಕ್ತರಿಂದ ಸೂಚನೆ ನೀಡಲಾಗಿತ್ತು ಇದರ ಬೆನ್ನಲ್ಲಿಯೇ ಅಧಿಕಾರಿಗಳು ಮರಳು ಗಣಿಗಾರಿಕೆ ಮಾಡುವುದಕ್ಕೆ ಬ್ರೇಕ್ ಹಾಕಿದ್ದು ಮರಳು ದಂಧೆಯಲ್ಲಿ ತೊಡಗಿದ್ದ ಯಂತ್ರಗಳನ್ನು ಹಾಗೂ 20ಕ್ಕೂ ಹೆಚ್ಚು ಬೋಟುಗಳನ್ನು ವಶಕ್ಕೆ ಪಡೆದುಕೊಂಡು ಮುರಿದು ಹಾಕಿದ್ದು ಬುಲ್ಡೋಜರ್ ಹಾಗೂ ಟ್ರ್ಯಾಕ್ಟರ್ ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ

ಹಳ್ಳದಿಂದ ಮರಳು ಎತ್ತುವ ಅನಧಿಕೃತ ಪಾಯಿಂಟ್ ಮೇಲೆ ಏಕಾಏಕಿ ದಾಳಿ ಮಾಡಿರುವ ಅಧಿಕಾರಿಗಳು ಮರಳು ಫಿಲ್ಟರ್ ಮಾಡಲು ಹಾಕಿದ್ದ ಶೆಡ್ ಸೇರಿದಂತೆ ಎಲ್ಲವನ್ನು ನಾಶಪಡಿಸಿದ್ದು ಇವುಗಳನ್ನು ನಾಶಪಡಿಸುವ ವೇಳೆಯಲ್ಲಿ ಅಕ್ರಮ ಮರಳು ದಂದೆಕೊರರು ಯಂತ್ರಗಳನ್ನು ನಾಶಪಡಿಸದಂತೆ ಅಂಗಲಾಚಿಕೊಂಡಿದ್ದಾರೆ.

Leave a Reply

error: Content is protected !!