LOCAL NEWS : ಕುಕನೂರು ಪ.ಪಂ. ಸಾಮಾನ್ಯ ಸಭೆ : ಪಟ್ಟಣದ ಅಭಿವೃದ್ಧಿಯ ಕುರಿತು ಗಂಭೀರ ಚರ್ಚೆ..!!

You are currently viewing LOCAL NEWS : ಕುಕನೂರು ಪ.ಪಂ. ಸಾಮಾನ್ಯ ಸಭೆ : ಪಟ್ಟಣದ ಅಭಿವೃದ್ಧಿಯ ಕುರಿತು ಗಂಭೀರ ಚರ್ಚೆ..!!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಕುಕನೂರು ಪ.ಪಂ. ಸಾಮಾನ್ಯ ಸಭೆ : ಪಟ್ಟಣದ ಅಭಿವೃದ್ಧಿಯ ಕುರಿತು ಗಂಭಿರ ಚರ್ಚೆ..!!

ಕುಕನೂರು : ಪಟ್ಟಣದ ಬಸ್ ನಿಲ್ದಾಣದಿಂದ ಜವಳದ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿಹೋಗಿದ್ದು ಸುಮಾರು ವರ್ಷಗಳಿಂದ ಯಾವುದೇ ದುರಸ್ತಿ ಕಾರ್ಯ ಜರುಗಿರುವುದಿಲ್ಲ. ಆದ್ದರಿಂದ ಶೀಘ್ರದಲ್ಲಿಯೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಬೇಕೆಂದು ಪಟ್ಟಣ ಪಂಚಾಯತಿ ಬಹುತೇಕ ಸದಸ್ಯರು ಸಭೆಯ ಅಧ್ಯಕ್ಷರನ್ನು ಹಾಗೂ ಮುಖ್ಯ ಅಧಿಕಾರಿಗಳನ್ನು ಒತ್ತಾಯಿಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಿತು.

ಈ ವೇಳೆ ಪ.ಪಂ ಸದಸ್ಯ ಸಿರಾಜುದ್ದೀನ್ ಕರಮುಡಿ ಮಾತನಾಡಿ, ‘ಜವಳ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಡಿಗಳಷ್ಟು ಆಳವಾದ ಗುಂಡಿಗಳಿದ್ದು ಅವುಗಳಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತದೆ ಆದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಚುನಾಯಿತ ಪ್ರತಿನಿಧಿಗಳಿಗೆ ನಾಗರಿಕರು ಇಡೀ ಶಾಪ ಹಾಕುತ್ತಿದ್ದಾರೆ ಆದ್ದರಿಂದ ಪಟ್ಟಣದ ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿ ಈ ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ಇನ್ನೋರ್ವ ಸದಸ್ಯ ಗಗನ ನೋಟಗಾರ ಮಾತನಾಡಿ, ‘ಪಟ್ಟಣದ ನಾಗರಿಕರ ಹಿತ ದೃಷ್ಟಿಯಿಂದ ಈ ರಸ್ತೆಯನ್ನು ದುರಸ್ತಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿ ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣ ಪಂಚಾಯಿತಿ ಎದುರುಗಡೆ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧ’ ಎಂದು ಹೇಳಿದರು.

ಇದರ ಜೊತೆಗೆ ಪಟ್ಟಣದಲ್ಲಿ ಕಿತ್ತೂರಾಣಿ ಚೆನ್ನಮ್ಮ ವೃತ್ತಕ್ಕೆ ಜಾಗ ಮಂಜೂರಿ, ಸರ್ಕಾರಿ ಪದವಿ ಪೂರ್ವ ವಿದ್ಯಾಲಯಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ, ಪಟ್ಟಣದ ಮುಖ್ಯರಸ್ತೆಯ ಡಿವೈಡರ್ಗೆ ಸಸಿ ನೆಡುವುದು, ಯಮನೂರಪ್ಪ ದರ್ಗಾ ಹಾಗೂ ಕೋಳಿಪೇಟೆ ಆಂಜನೇಯ ದೇವಸ್ಥಾನಕ್ಕೆ ಸ್ವಾಗತ ಕಮಾನು ನಿರ್ಮಾಣ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಿತು.

ಈ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ರಮೇಶ್ ಎಡಿಯಾಪುರ, ಉಪಾಧ್ಯಕ್ಷ, ಪ್ರಶಾಂತ ಆರುಬೆರಳಿನ, ಹಾಗೂ ಸದಸ್ಯರು, ಮುಖ್ಯಧಿಕಾರಿ ನಬೀಸಾಬ್ ಕಂದಗಲ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Leave a Reply

error: Content is protected !!