ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ಕುಕನೂರು ಪಟ್ಟಣದ ಫುಟ್ಪಾತ್ ತೆರವು ಕಾರ್ಯಾಚರಣೆ..!
ಕುಕನೂರು : ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಂದ ಫುಟ್ಪಾತ್ ತೆರವು ಕಾರ್ಯಾಚರಣೆ ಶನಿವಾರ ಜರುಗಿತು.
ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ನಬೀಸಾಬ್ ಕಂದಗಲ್ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಫುಟ್ಪಾತ್ ತೆರವು ಕಾರ್ಯಾಚರಣೆ ಬರದಿಂದ ಜರುಗಿದ್ದು ಪಟ್ಟಣದ ಬಸ್ಟ್ಯಾಂಡ್ ಪ್ರದೇಶದಲ್ಲಿದ್ದ ಎಲ್ಲಾ ಫುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಈ ವೇಳೆಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರಾದರು ಬಸ್ಟ್ಯಾಂಡ್ ಮುಂದೆ ಇದ್ದ ಅಂಗಡಿಗಳಿಂದ ಬಸ್ ನಿಲ್ದಾಣವೇ ಕಾಣದಂತಹ ಪರಿಸ್ಥಿತಿ ಉಂಟಾಗಿದ್ದು ಸದ್ಯ ಸಂಪೂರ್ಣವಾಗಿ ಬೀದಿಬದಿ ಅಂಗಡಿಗಳ ತೆರವಿನಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿರುವುದಷ್ಟೇ ಅಲ್ಲದೆ ಬಸ್ ನಿಲ್ದಾಣ ಸಹ ಸುಲಭವಾಗಿ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯಿತಿ ಕುಕನೂರು.
ಈ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಬಿಸಾಬ್ ಕಂದಗಲ್ ವರದಿಗಾರರೊಂದಿಗೆ ಮಾತನಾಡಿ, ‘ಪಟ್ಟಣದಲ್ಲಿ ದಿನದಿನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಪಾದಾಚಾರಿಗಳು ರಸ್ತೆಯಲ್ಲಿ ನಡೆದಾಡುವ ಪರಿಸ್ಥಿತಿ ಎದುರಾಗಿದ್ದು, ಇನ್ನು ಮುಂದೆ ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುವುದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಸಂಚಾರ ಸುಗಮಗೊಳ್ಳಲಿದ್ದು, ಅಹಿತಕರ ಘಟನೆಗಳು ಸಂಭವಿಸುವ ಪರಿಸ್ಥಿತಿ ತೀರ ವೆರಳವಾಗಿರುವ ಆಶಾಭಾವನೆಗಳು ಇವೆ. ಇದರ ಜೊತೆಗೆ ಫುಟ್ಪಾತ್ ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳ ಜೊತೆ ಪಟ್ಟಣದ ನಾಗರಿಕರು ಹಾಗೂ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ಸಹಕರಿಸಿದ್ದಾರೆ’ ಎಂದು ಹೇಳಿದರು.