ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ಕುಕನೂರು : ಶಕ್ತಿ ಯೋಜನೆಯಡಿ ಬಸ್ ಪ್ರಯಾಣ 500 ಕೋಟಿ ದಾಟಿದ ಸಂಭ್ರಮಾಚರಣೆ ಕಾರ್ಯಕ್ರಮ..!
ಕುಕನೂರು : ತಾಲೂಕ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಶಕ್ತಿ ಯೋಜನೆಯಡಿಬಸ್ ಪ್ರಯಾಣ 500 ಕೋಟಿ ದಾಟಿದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಇಂದು ಬೆಳಗ್ಗೆ 10:30ಕ್ಕೆ ಕುಕನೂರು ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇವಲ ಎರಡು ವರ್ಷದ ಅವಧಿಯಲ್ಲಿ ಕುಕನೂರು ತಾಲೂಕಿನಲ್ಲೆ ಕುಕನೂರು ಘಟಕದಿಂದ ಮಹಿಳೆಯರು ಬಸ್ ಪ್ರಮಾಣ ಮಾಡದ ಒಟ್ಟು ಸಂಖ್ಯೆ 91,22,271 ಪ್ರಯಾಣ ಮಾಡಿದ್ದಾರೆ. ಇದಕ್ಕೆ ವೆಚ್ಚ ಒಟ್ಟು ಮೊತ್ತ 33,96,48,776 ರೂಪಾಯಿಗಳು ಸರ್ಕಾರವು ಟಿಕೇಟ್ ದರವನ್ನು ಭರಿಸಿದೆ ಎಂದು ತಾಲೂಕ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಮಾಹಿತಿ ನೀಡಿದ್ದಾರೆ.