LOCAL NEWS : ಸಾಮಾಜಿಕ ಜಾಲತಾಣಗಳು ನಿಮ್ಮ ಗುರಿಯ ಮಾರ್ಗಕ್ಕೆ ಮುಳುವಾಗದಿರಲಿ : ಐಎಫ್‌ಎಸ್‌ ರಾಕೇಶ್‌ ನಾಯ್ಕ್

You are currently viewing LOCAL NEWS : ಸಾಮಾಜಿಕ ಜಾಲತಾಣಗಳು ನಿಮ್ಮ ಗುರಿಯ ಮಾರ್ಗಕ್ಕೆ ಮುಳುವಾಗದಿರಲಿ : ಐಎಫ್‌ಎಸ್‌ ರಾಕೇಶ್‌ ನಾಯ್ಕ್

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಸಾಮಾಜಿಕ ಜಾಲತಾಣಗಳು ನಿಮ್ಮ ಗುರಿಯ ಮಾರ್ಗಕ್ಕೆ ಮುಳುವಾಗದಿರಲಿ : ಐಎಫ್‌ಎಸ್‌ ರಾಕೇಶ್‌ ನಾಯ್ಕ್

ಕೊಪ್ಪಳ : ಇಂದಿನ ಮಕ್ಕಳ ಅತೀ ಹೆಚ್ಚು ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತರಿದ್ದು, ಈ ಸಾಮಾಜಿಕ ಜಾಲತಾಣಗಳು ಮಕ್ಕಳ ಶಿಕ್ಷಣ ಹಾಗೂ ಅವರ ಗುರಿಯ ಮಾರ್ಗಕ್ಕೆ ಮುಳುವಾಗಬಹುದು. ಆದ್ದರಿಂದ ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ಉತ್ತಮ ಎಂದು ಐಎಫ್‌ಎಸ್‌ (Indian Forest Service) ಭಾವಿ ಅಧಿಕಾರಿ ರಾಕೇಶ್‌ ನಾಯ್ಕ್ ಅಭಿಪ್ರಾಯಪಟ್ಟರು.

ಇಂದು ನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.) ಕೊಪ್ಪಳ ಇವರ ವತಿಯಿಂದ “ಪ್ರತಿಭಾ ಪುರಸ್ಕಾರ ಸಮಾರಂಭ-2025″ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬಂಜಾರ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ & ಸನ್ಮಾನವನ್ನು ಹಮ್ಮಿಕೊಂಡಿದ್ದರು.

ಐಎಫ್‌ಎಸ್‌ (Indian Forest Service) ಭಾವಿ ಅಧಿಕಾರಿ ರಾಕೇಶ್‌ ನಾಯ್ಕ್ ಅವರಿಗೆ ಸನ್ಮಾನ

 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಾಕೇಶ್‌ ನಾಯ್ಕ್ ಮಾತನಾಡಿ, ‘ನಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ಸತತ ಮೂರು ಬಾರಿ ಅನುತ್ತೀರ್ಣನಾದ ನಾನು, ನಾಲ್ಕನೇ ಅವಕಾಶಕ್ಕೆ ದೇಶದ ಅತ್ತುನ್ನತ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ 2024ರಲ್ಲಿ 122ನೇ ರ್ಯಾಂಕ್ ಆಗಿ ಉತ್ತೀರ್ಣನಾಗಿ ಐ.ಎಫ್.ಎಸ್ ಸೇವೆ ಸಲ್ಲಿಸಲು ಇದೀಗ ಸಿದ್ದನಾಗಿದ್ದೇನೆ. ಸತತ ಸೋಲಿನಿಂದ ಯಶಸ್ಸಿನ ಮಾರ್ಗವನ್ನು ಕಂಡು ಕೊಳ್ಳಬಹುದು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಒಂದು ಸಾಧನೆ ಮಾಡೋದಕ್ಕೆ ಹೊರಟ್ರೆ ಸಾಕಷ್ಟು ಅಡತಡೆಗಳು ಬಂದರು ನಿರ್ದಿಷ್ಟವಾದ ಗುರಿಯನ್ನು ಹೊಂದಬೇಕಾಗುತ್ತದೆ. ಮನಸ್ಸನ್ನ ಹಿಡಿತದಲ್ಲಿಟ್ಟುಕೊಂಡು ಪ್ರತಿನಿತ್ಯ ಅಭ್ಯಾಸದ ಕಡೆ ಗಮನಹರಿಸಿದರೆ, ಮುಂದೆ ಬಹುದೊಡ್ಡ ಸಾಧಕರಾಗಿ ಸಮಾಜದ ನಿಮ್ಮನ್ನು ಗುರುತಿಸಿ ಮಾನ ಸನ್ಮಾನ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯವನ್ನು ಲಿಂಗಸಗೂರಿನ ಶ್ರೀ ಮಹಾಂತೇಶ್ವರ ಪಟ್ಟದ ಮಠ ಸಿದ್ದಲಿಂಗ ಮಹಾ ಸ್ವಾಮಿಗಳು ಹಾಗೂ ಗುರು ಗೋಸಾಯಿಬಾವನವರು ವಹಿಸಿದ್ದರು. 

ಈ ವೇಳೆಯಲ್ಲಿ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.)ದ ಅಧ್ಯಕ್ಷ ಶಿವಾನಂದ ನಾಯ್ಕ್‌, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ ಸುರೇಶ್‌ , ಸಿ.ಪಿ.ಐ ಗಂಗಾವತಿ ಗ್ರಾಮೀಣ ವೃತ್ತ ಪ್ರಕಾಶ್‌ ಮಾಳಿ,  ಭರತ್‌ ನಾಯ್ಕ್, ಬಂಜಾರ ಹಿರಿಯ ಮುಖಂಡರು ಕೊಪ್ಪಳ, ಲಕ್ಷ್ಮಣ ನಾಯ್ಕ್‌ ಎಐಬಿಎಸ್‌ಎಸ್‌ನ ಜಿಲ್ಲಾ ಅಧ್ಯಕ್ಷರು ಕೊಪ್ಪಳ, ಗೋರ್‌ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ ಬಳೂಟಗಿ, ದೀಪಾ ಕುಮಾರ್‌ ರಾಠೋಡ್‌, ಪಂಪಣ್ಣ ಪೂಜಾರ್‌, ಹಾಗೂ ಇನ್ನು ಸಮಾಜದ ಮುಖಂಡರನ್ನು ಸನ್ಮಾನಿಸಿದರು. ಜೊತೆಗೆ ತೇಜಪ್ಪ ನಾಯ್ಕ್‌, ಪ್ರಕಾಶ್‌ ನಾಯ್ಕ್‌, ವಿಷ್ಣು ನಾಯ್ಕ್ ಹಾಗೂ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರತಿಭಾನ್ವಿತ ಮಕ್ಕಳು ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!