ಯಲಬುರ್ಗಾ-ಕುಕನೂರು : ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು. ಕಳೆದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಇರುವ ರಾಜ್ಯದ ಉಪಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಬಿಜೆಪಿ ಪಕ್ಷ ಬಿಡುವ ನಿರ್ಧಾರ ತಗೆದುಕೊಂಡಿದ್ದು, ಬಿಜೆಪಿದ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಲಕ್ಷ್ಮಣ ಸವದಿ ಅವರಿಗೆ ಗಾಳ ಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಹಿಂದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯ ಬಹು ಮುಖ್ಯ ಪಾತ್ರವಿದೆ ಎಂದು ತಿಳಿದು ಬಂದಿದೆ.
ಬಸವರಾಜ ರಾಯರೆಡ್ಡಿಯ ಚಾಣಾಕ್ಷ ನಡೆ
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗಾಣಿಗ ಸಮುದಾಯದ ಪ್ರಬಲ ನಾಯಕರಾಗಿದ್ದು, ಅದು ಅಲ್ಲದೇ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಆಪ್ತ ಸಂಬಂಧಿ ಕೂಡ ಆಗಿದ್ದಾರೆ. ರಾಯರೆಡ್ಡಿ ಅವರು ಬಿಜೆಪಿಯ ದೊಡ್ಡ ನಾಯಕನನ್ನು ಆಪರೇಷನ್ ಹಸ್ತ ಮಾಡುದಲ್ಲದೇ, ತಮ್ಮ ಕ್ಷೇತ್ರದಲ್ಲಿ ಗೆಲುವನ್ನು ಸುಲಭ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಉದ್ಭವಿಸಿಕೊಂಡಿದೆ. ಲಕ್ಷ್ಮಣ ಸವದಿ ಅವರು ಇಂದು ಸಂಜೆ 4 ಗಂಟೆ ಸುಮಾರಿಗೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.
ಸವದಿ ಅವರನ್ನು ಕಾಂಗ್ರೆಸ್ಗೆ ಕೆರೆ ತರುವ ಹಿಂದೆ ಬಸವರಾಜ ರಾಯರೆಡ್ಡಿಯವರ ಗೆಲುವಿನ ತಂತ್ರವಿದೆ ಎನ್ನುವು ರಾಜಕೀಯ ವಿಶ್ಲೇಷಕರವಾದವಾಗಿದೆ. ಕಾಂಗ್ರೆಸ್‌ನ ಪಾಳಯದಲ್ಲಿ ಪ್ರಭಲ ನಾಯಕನಾಗಿರುವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ನೋಡುವುದಾರೆ, ಇಲ್ಲಿ ಗಾಣಿಗ ಸಮೂದಾಯ 40 ಸಾವಿರ ಮತಗಳಿವೆ. ಹಿಗಾಗಿ ಸವದಿ ಅವರನ್ನು ತಮ್ಮ ಪಕ್ಷಕ್ಕೆ ಬಂದರೆ ಗಾಣಿಗ ಸಮುದಾಯ ಮತಗಳನ್ನು ಸೆಳೆಯಲು ಸುಲಭವಾದ ಮಾರ್ಗವಾಗುತ್ತದೆ. ಆದ್ದರಿಂದ ತಮ್ಮ ಗೆಲುವು ಸುಲಭ ಎಂದು ಬಸವರಾಜ ರಾಯರೆಡ್ಡಿ ಅವರು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗುತ್ತಿದೆ.
