LOCAL NEWS : ಮುನಿರಾಬಾದ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಕಳುವಾಗಿದ್ದ 24 ದ್ವಿಚಕ್ರ ವಾಹನ ವಶ..!!

You are currently viewing LOCAL NEWS : ಮುನಿರಾಬಾದ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಕಳುವಾಗಿದ್ದ 24 ದ್ವಿಚಕ್ರ ವಾಹನ ವಶ..!!

ಪ್ರಜಾವೀಕ್ಷಣೆ ಸುದ್ದಿ : 

LOCAL NEWS : ಮುನಿರಾಬಾದ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಕಳುವಾಗಿದ್ದ 24 ದ್ವಿಚಕ್ರ ವಾಹನ ವಶ..!!

ಕೊಪ್ಪಳ : ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಕನಪಳ್ಳಿ ಸಂತೆಯಲ್ಲಿ ದ್ವಿಚಕ್ರವಾಹನವೊಂದು ಕಳ್ಳತನ ವಾದ ಕುರಿತು ನೀಡಿದ್ದ ದೂರಿನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದ್ದು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನೂ ಹಿಡಿದು ವಿಚಾರಣೆ ಮಾಡಿದ್ದಾಗ ಹೆಸರು ಹಾಗೂ ತಾನು ಮಾಡಿದ ಕೃತ್ಯಗಳನ್ನು ಪೊಲೀಸರಿಗೆ ಬಾಯಿಬಿಟ್ಟಿದ್ದು ಕುಕನಪಲ್ಲಿ, ಸಿಂಧನೂರು, ಕಂಪ್ಲಿ, ಹೊಸಪೇಟೆ, ಕುಷ್ಟಗಿ ಮತ್ತು ಕೊಪ್ಪಳ ನಗರದಲ್ಲಿ ಪೊಲೀಸ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಒಟ್ಟು 16, ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಪ್ರಕರಣದ ಪತ್ತೆ ಕುರಿತು ಆರ್. ಹೇಮಂತಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಮತ್ತು ಮುತ್ತಣ್ಣ ಸರವಗೋಳ ಪೊಲೀಸ್ ಉಪಾಧೀಕ್ಷಕರು ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಡಿ.ಸುರೇಶ, ಗ್ರಾಮೀಣ ವೃತ್ತ ನಿರೀಕ್ಷಕರು ಕೊಪ್ಪಳ ರವರ ನೇತೃತ್ವದಲ್ಲಿ, ಸುನೀಲ್ ಹೆಚ್, ಪಿ.ಎಸ್.ಐ. ಮತ್ತು ಶಮಲ್ಲಪ್ಪ ಪಿ.ಎಸ್.ಐ.(ತನಿಖೆ) ಮುನಿರಾಬಾದ ಠಾಣೆ ಎಂ.ಬಿ.ಇನಾಯತ್ ಎ.ಎಸ್.ಐ.,ಹೆಚ್‌ಸಿ ಮಹೇಶ ಸಜ್ಜನ, ರಾಜಶೇಖರ, ಸಿಪಿಸಿ ಈರೇಶ, ಶಿವಶಂಕರ, ಮಹಾಂತೇಶ, ವಾಹನ ಚಾಲಕರ ಚಂದ್ರಶೇಖರ ವೆಂಕಟೇಶ, ಶರಣಪ್ಪ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.

ಮೇಲ್ಕಂಡ ಪ್ರಕರಣ ದಾಖಲಾದ ಎರಡೇ ದಿನಗಳಲ್ಲಿ ಮುನಿರಾಬಾದ ಠಾಣಾ ವ್ಯಾಪ್ತಿ ಸಹಿತ ಬೇರೆ ಬೇರೆ ಕಡೆಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಈ ಪ್ರಕರಣ ಸಹಿತ ಬೇರೆ ಬೇರೆ ಠಾಣೆಯ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಡಾ: ರಾಮ್ ಎಲ್. ಅರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.

Leave a Reply

error: Content is protected !!