You are currently viewing BREAKING : ಪ್ರೀತಿಯ ಮದುವೆ ಅಂತ್ಯವಾಯ್ತು ರಕ್ತರಂಜಿತ ಕೊಲೆಯಲ್ಲಿ..! : ಪ್ರೇಮದ ಹೆಸರಿನಲ್ಲಿ ಭೀಕರ ಕೊಲೆ! 

BREAKING : ಪ್ರೀತಿಯ ಮದುವೆ ಅಂತ್ಯವಾಯ್ತು ರಕ್ತರಂಜಿತ ಕೊಲೆಯಲ್ಲಿ..! : ಪ್ರೇಮದ ಹೆಸರಿನಲ್ಲಿ ಭೀಕರ ಕೊಲೆ! 

BREAKING : ಪ್ರೀತಿಯ ಮದುವೆ ಅಂತ್ಯವಾಯ್ತು ರಕ್ತರಂಜಿತ ಕೊಲೆಯಲ್ಲಿ..! : ಪ್ರೇಮದ ಹೆಸರಿನಲ್ಲಿ ಭೀಕರ ಕೊಲೆ! 

PV ನ್ಯೂಸ್ ಡಿಜಿಟಲ್ : 

ಗದಗ, ಮೇ 22 : ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಯುವತಿಯೇ ತನ್ನ ಗಂಡನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

28 ವರ್ಷದ ವಿಶ್ವನಾಥ ಹಾದಿಮನಿ ಎಂಬಾತನು ಮನೆಯ ಬೆಡ್‌ರೂಮ್‌ನಲ್ಲಿ ಮಲಗಿದ್ದ ವೇಳೆ, 27 ವರ್ಷದ ಪತ್ನಿ ಕವಿತಾ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶ್ವನಾಥ್ ಹಾಗೂ ಕವಿತಾ ಇಬ್ಬರೂ ಪರಸ್ಪರ ಪ್ರೀತಿಸಿ, ಮನೆಯವರ ಒಪ್ಪಿಗೆಯೊಂದಿಗೆ 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯ ನಂತರ ದಾಂಪತ್ಯ ಜೀವನದಲ್ಲಿ ಅಸಮಾಧಾನ ಮತ್ತು ವೈಮನಸ್ಸು ಉಂಟಾಗಿತ್ತು ಎಂಬ ಮಾಹಿತಿ ಕೇಳಿಬರುತ್ತಿದೆ.

ಮದುವೆಯ ಬಳಿಕ ಕೆಲಕಾಲ ತವರು ಮನೆಯಲ್ಲಿ ಇದ್ದ ಕವಿತಾ, ಇತ್ತೀಚೆಗೆ ಗಂಡನ ಸಹೋದರಿಯ ಮದುವೆ ಕಾರ್ಯಕ್ರಮಕ್ಕಾಗಿ ಮತ್ತೆ ಪತಿಯ ಮನೆಗೆ ಬಂದಿದ್ದಳು ಎಂದು ತಿಳಿದುಬಂದಿದೆ. ಇದೇ ವೇಳೆ ಈ ದಾರುಣ ಘಟನೆ ನಡೆದಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಪ್ರಕರಣ ಸಂಬಂಧ ಕವಿತಾಳನ್ನು ವಶಕ್ಕೆ ಪಡೆದಿರುವ ನರಗುಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣವೇನು? ದಾಂಪತ್ಯ ಕಲಹವೇ ಅಥವಾ ಬೇರೆ ಯಾವುದೇ ವೈಯಕ್ತಿಕ ಕಾರಣಗಳಿವೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಈ ನಡುವೆ “ಪ್ರೀತಿ ಮದುವೆಯ ಹಿಂದೆ ಮತ್ತೊಂದು ಸಂಬಂಧದ ನೆರಳು ಇದೆಯೇ?” ಎಂಬ ಅನುಮಾನವೂ ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತ ಅಧಿಕೃತ ಮಾಹಿತಿ ತನಿಖೆ ಪೂರ್ಣಗೊಂಡ ಬಳಿಕವೇ ಹೊರಬೀಳಬೇಕಿದೆ.

Prajavikshane

Chandru R Bhanapaur

Leave a Reply

error: Content is protected !!