“ಕೊಪ್ಫಳ | ಡಿಸಿ ಕಚೇರಿ ಎದುರು ತತ್ವಪದಗಳನ್ನು ಹಾಡಿ ಶೇ.%1 ರಷ್ಟು ಒಳಮೀಸಲಾತಿ ನೀಡುವಂತೆ ಒತ್ತಾಯಿಸಿ ಅಲೆಮಾರಿ ಸಮುದಾಯದಿಂದ ಬೃಹತ್ ಪ್ರತಿಭಟನೆ”
ಪ್ರಜಾವೀಕ್ಷಣೆ ಡೆಸ್ಕ್ ನ್ಯೂಸ್ :
ಕೊಪ್ಫಳ : ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘವು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಒಳ ಮೀಸಲು ಜಾರಿಗೆ ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಗುರುವಾರ ವಿನೂತನ ಪ್ರತಿಭಟನೆ ನಡೆಸಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಜೊತೆಗೆ ಅಲೆಮಾರಿ ಸಮುದಾಯದ ಮುಖಂಡರಾದ ಗುಂಡಪ್ಪ, ಯಲ್ಲಪ್ಪ, ಆಂಜಿನಪ್ಪ, ಮಾರುತಿ ಸೇರಿದಂತೆ ಹಲವರು ತತ್ವಪದ ಹಾಡಿ ಸರಕಾರದ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಸಿ ಅಲೆಮಾರಿ ಸಂಘದ ರಾಜ್ಯಾಧ್ಯಕ್ಷ ಪರಸಪ್ಪ ಚೆನ್ನದಾಸರ್ ಅವರು ಮಾತನಾಡಿ, ಕಳೆದ 35 ವರ್ಷಗಳಿಂದ ಯಾವುದೇ ಮೀಸಲು ಸಿಕ್ಕಿಲ್ಲ. ಪರಿಶಿಷ್ಟ ಜಾತಿಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಒಳ ಮೀಸಲಿಗೆ ಸಂಬಂಧಿಸಿದಂತೆ ಸರಕಾರ, ನ್ಯಾಯಮೂರ್ತಿ ಡಾ.ಎಚ್.ಎನ್.ನಾಗ ಮೋಹನದಾಸ್ ಏಕ ಸದಸ್ಯ ಆಯೋಗದ ವರದಿ ತನಿಖೆ ನಡೆಸಲು ಪ್ರಾರಂಭಿಸಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರಿಗೆ ಶೇ.1 ಮೀಸಲು ನೀಡಲು ಹೇಳಿತ್ತು. ಆದರೆ, ಯಾವುದೇ ಕಾರಣವಿಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಲಾಡ್ಯ ಜಾತಿಗಳ ಜತೆಯಲ್ಲಿಇಂತಹ ಸಮುದಾಯಗಳನ್ನು ಸೇರಿಸಿ, ಆದೇಶ ಹೊರಡಿಸಿರುವದು ಸರಿಯಿಲ್ಲ ಎಂದು ಕಿಡಿಕಾರಿದರು.
ನಾವು ಬಹಳಷ್ಟು ವರ್ಷಗಳಿಂದ ಗುಡಿಸಲಿನಲ್ಲಿವಾಸ ಮಾಡುತ್ತಾ, ಶಿಕ್ಷಣ ವಂಚಿತರಾಗಿ ಮತ್ತು ಉದ್ಯೋಗ ವಂಚಿತರಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದೇವೆ. ಸರಕಾರದ ಈ ತೀರ್ಮಾನದಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ . ಹೀಗಾಗಿ ನಮಗೆ ಶೇ.1ರಷ್ಟು ಮೀಸಲಾತಿ ಕೊಟ್ಟು ಸರ್ಕಾರ ನ್ಯಾಯ ಕೊಡಬೇಕೆಂದು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಪರಸಪ್ಪ ಚೆನ್ನದಾಸರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ಚೆನ್ನದಾಸರ, ಜಿಲ್ಲಾಧ್ಯಕ್ಷ ದುರುಗಪ್ಪ ದೊಡ್ಮನಿ, ತಾಲೂಕು ಘಟಕದ ಅಧ್ಯಕ್ಷ ಹನುಮಂತ ಚೆನ್ನದಾಸರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಅಲೆಮಾರಿ ಸಮುದಾಯದವರು ಮತ್ತು ಮುಖಂಡರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಿದ್ದರು.