You are currently viewing LOCAL NEWS : 2026-27ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆ
ಕುದುರೆಮೋತಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮ ಸಭೆ ನಡೆಯಿತು.

LOCAL NEWS : 2026-27ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆ

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : 2026-27ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆ

ಕುದುರೆಮೋತಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮ ಸಭೆ ನಡೆಯಿತು.

ಕುಕನೂರು : ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ರೈತರ, ಕೂಲಿಕಾರರಿಗೆ ವರದಾನವಾಗಿದೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಶುರಾಮ ನಾಯಕ ಹೇಳಿದರು.

ತಾಲೂಕಿನ ಕುದುರೆಮೋತಿ ಗ್ರಾಮ ಪಂಚಾಯತಿಯ ಆವರಣದಲ್ಲಿ 2026-27ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆ ಕುರಿತು ಪಂಚಾಯತಿ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ವಾರ್ಡ್ ಸಭೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದು ಈಗ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ.

ಗ್ರಾಮ ಪಂಚಾಯತಿಯಿಂದ ಹಾಗು ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುತ್ತದೆ. ರೈತರು‌ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರಿ. ಕೂಲಿ & ಸಾಮಾಗ್ರಿ ಹಣದಿಂದ ಅನುಕೂಲವಾಗುತ್ತದೆಂದರು. ರಾಷ್ಟ್ರೀಯ ತೋಟಗಾರಿಕೆ ಇಲಾಖೆಯಿಂದ ಅಲ್ಲಿಯೂ ಕೂಡಾ ಸೌಲಭ್ಯ ದೊರೆಯುತ್ತದೆ. ಎಂದರು.

ವಾರ್ಡಸಭೆ ಹಾಗೂ ಗ್ರಾಮ ಸಭೆಗಳ ಮೂಲಕ ಗ್ರಾಮ ಪಂಚಾಯತಿಯಿಂದ ಕಾಮಗಾರಿ ಬೇಡಿಕೆ ಪಡೆಯಲು ವಾರ್ಡಸಭೆ ಜರುಗಿಸಲಾಗುತ್ತಿದ್ದು ಕೂಲಿಕಾರರ, ರೈತರ ಬೇಡಿಕೆ ಸಲ್ಲಿಸಲು ಇದೊಂದು ಸದಾವಕಾಶ ಇರುವದರಿಂದ ಯಾವ ಕಾಮಗಾರಿ ಅವಶ್ಯಕತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾಮಗಾರಿ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರೆಂದು ಕರೆ ನೀಡಿದರು.

ವೈಯಕ್ತಿಕ ಕಾಮಗಾರಿ ಜಾನುವಾರು ಶೆಡ್‌, ಮೆಕೆಶೆಡ್‌, ಕೃಷಿಹೊಂಡ, ಬದು ನಿರ್ಮಾಣ, ಕೊಳಿ ಶೆಡ್‌ ಇತ್ಯಾದಿಗಳನ್ನು ಮಾಡಿಕೊಳ್ಳಲು ಅವಕಾಶ ಇರುವದನ್ನು ಬಳಕೆ ಮಾಡಿಕೊಳ್ಳಲು ಹಾಜರಿದ್ದ ರೈತರಿಗೆ, ಸಂಜಿವಿನಿ ಯೋಜನೆಯ ಮಹಿಳೆಯರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ರೈತರಿಂದ, ಕೂಲಿಕಾರರಿಂದ ಕಾಮಗಾರಿ ಬೇಡಿಕೆಯ ನಮೂನೆಯನ್ನು ಸ್ವೀಕರಿಸಲಾಯಿತು.

  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು,ಮಹಿಳೆಯರು, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

Leave a Reply

error: Content is protected !!