You are currently viewing ಭಾವೈಕ್ಯತೆಯ ಸಾರಿದ ಮುದಗಲ್ಲ ಮೊಹರಂಗೆ ಸಂಭ್ರಮದ ಹಬ್ಬಕ್ಕೆ ತೆರೆ…

ಭಾವೈಕ್ಯತೆಯ ಸಾರಿದ ಮುದಗಲ್ಲ ಮೊಹರಂಗೆ ಸಂಭ್ರಮದ ಹಬ್ಬಕ್ಕೆ ತೆರೆ…

ಮುದಗಲ್ಲ ವರದಿ..

ಭಾವೈಕ್ಯತೆಯ ಸಾರಿದ ಮುದಗಲ್ಲ ಮೊಹರಂಗೆ ಸಂಭ್ರಮದ ಹಬ್ಬಕ್ಕೆ ತೆರೆ…

ಮೊಹರಂ ಕೊನೆ ದಿನ ಆಲಂಗಳ ದಫನ್ ..

ಮುದಗಲ್: ಮೊಹರಂ ಕೊನೆಯ ದಿನವಾದ ಶುಕ್ರವಾರ ಪಟ್ಟಣದ ಹಲವು ದಗಾ೯ದಲ್ಲಿ ಕುಳಿತಿದ್ದ ಆಲಂ ಗಳು ಕೋಟೆ ಮುಂಭಾಗ ತಂದು ಪರಸ್ಪರ ಭೇಟಿ ಮಾಡಿಸಿ ಧಪನ್ ಮಾಡಿದರು.

ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ, ಮುದಗಲ್ ಮೊಹರಂ ವೀಕ್ಷಣೆಗೆ ದೇಶ, ವಿದೇಶದಿಂದ ಜನರು ಆಗಮಿಸಿದ್ದರು. ಶುಕ್ರವಾರ ಕೊನೆಯ ದಿನವಾಗಿದ್ದರಿಂದ ಕೋಟೆ ಹೊರಭಾಗದಲ್ಲಿ  ಹಸನ್-ಹುಸೇನ್ ಸಹೋದರ ರಿಬ್ಬರ (ಭೇಟಿ) ಬೆಳ್ಳಿ ಪಾಂಜಾಗಳನ್ನು ಮುಖಾಬಿಲೆ ಯಾಗುವುದು ನೆರೆದ ಲಕ್ಷಾಂತರ ಜನರ ಕಣ್ಣಲ್ಲಿ ನೀರು ತರಿಸಿತು.
ತ್ಯಾಗ ಬಲಿದಾನದ ಸಂಕಿತವಾ ಗಿರುವ ಮೊಹರಂ ಹಬ್ಬವನ್ನು ಹಿಂದು ಹಾಗೂ ಮುಸ್ಲಿಂ ಧರ್ಮದವರು ಜಾತಿ ಭೇದ ಮರೆತು ಹಬ್ಬ ಆಚರಣೆ ಮಾಡಿದರು. ಭಕ್ತರು  ತಮ್ಮ ಹರಕೆಗಳನ್ನು ಸಲ್ಲಿಸಿದರು. ಫಕೀರರು ತಮ್ಮ ಲಾಡಿಗಳನ್ನು ಅಲಾಯಿ ಕುಣಿಗೆ ಹಾಕಿ, ಮುಚ್ಚಿದರು.
ಆಲಂಗಳ ಭೇಟಿಯನ್ನು ಮುಂಚೆ ಮಳೆರಾಯ ಧರಗಿಳಿದು ನೆರೆದ ಜನರಿಗೆ ಅಡ್ಡಿಪಡಿಸಿದ್ದು ಕಂಡುಬಂತು. “ಮೇಗಳಪೇಟೆಯ ದರ್ಗಾದಿಂದ ಇಮಾಮ್ ಹಸನ್, ಕಿಲ್ಲಾದಿಂದ ಇಮಾಮ್ ಹುಸೇನ್, ವೆಂಕಟರಾಯ ಪೇಟೆಯಿಂದ ಕಾಸಿಂ ಪೀರಾ ದೇವರನ್ನು ಮೆರವಣಿಗೆ ಮೂಲಕ ಕೋಟೆ ಮುಂಭಾಗಕ್ಕೆ ಕರೆ ತರಲಾಯಿತು.

220 ಕ್ಕೂ ಹೆಚ್ಚು ತರಬೇತಿ ಪಡೆಯುತ್ತಿರುವ ಪಿ.ಎಸ್.ಐ ಗಳು ಸೇರಿದಂತೆ 600 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ, ವಿಧಾನ ಪರಿಷತ್  ಶರಣಗೌಡ ಪಾಟೀಲ ಬಯ್ಯಾಪುರ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಲಿಂಗಸುಗೂರು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಧೀಶೆ ಹುಂಡಿ ಮಂಜುಳಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ, ಪಂಚಾಯತ್‌ ರಾಜ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿನ ಕಾರ್ಯದರ್ಶಿ ಎಂ.ಚಂದ್ರಶೇಖರ, ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಗ್ಲು ಗಿರಿ, ಲಿಂಗಸೂಗೂರು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲ್ಲಶೆಟ್ಟಿ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ, ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ, ಮಸ್ಕಿ ವೃತ್ತ ಸಿಪಿಐ ಆರ್ ವೈ ಜಲಗೇರಿ, ಪಿಎಸ್ఐ ವೆಂಕಟೇಶ ಮಾಡಗಿರಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ವೀರನಗೌಡ ಲಕ್ಕಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ, ಪಾಮಯ್ಯ ಮುರಾರಿ, ಗುರುಬಸಪ್ಪ ಸಜ್ಜನ್,ಹುಸೇನಿ ಆಲಂ ದರ್ಗಾ ಕಮಿಟಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿ ಗಳು, ವಿವಿಧ ಪಕ್ಷದ ಮುಖಂಡರು, ಗಣ್ಯರು, ಸಹಸ್ರಾರು ಭಕ್ತರು ಇದ್ದರು.
 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!