ಮುದಗಲ್ಲ ವರದಿ…
ಮುದಗಲ್ಲ :- ಕಾಂಗ್ರೆಸ್‌ನಲ್ಲಿ ದಲಿತರಿಂದ ದಲಿತರಿಗೆ ಅನ್ಯಾಯ: ಆ. ರುದ್ರಯ್ಯ…

ಮುದಗಲ್: ‘ಕರ್ನಾಟಕದ ಮುಖ್ಯ ಮಂತ್ರಿ ಹುದ್ದೆ ದಲಿತರಿಗೆ
ದೊರೆಯುವ ಅವಕಾಶ ಇದ್ದರೂ ದಲಿತರಿಂದಲೇ ದಲಿತರಿಗೆ
ಅನ್ಯಾಯವಾಗಿದೆ’ ಎಂದು ನೀರಾವರಿ ಇಲಾಖೆ ಮಾಜಿ
ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಮುಖಂಡ ಆರ್. ರುದ್ರಯ್ಯ
ಹೇಳಿದರು.
ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು
ಮಾತನಾಡಿದರು..’ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಅವರು ಹೇಳಿದವರೇ ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗುತ್ತಾರೆ. ಅವರು ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದವರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕೇಂದ್ರ ಸರ್ಕಾರದ ಎಸ್‌ಐಆರ್ ಬಗ್ಗೆ ಕುರಿತು ಮುಸ್ಲಿಂ ಸಮುದಾಯ ದವರಿಗೆ ಇಲ್ಲ ಸಲ್ಲದ ವಿಚಾರ ಗಳನ್ನು ಬಿತ್ತಿ ಸಮುದಾಯವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದೆ. ತಪ್ಪು.ಗ್ರಹಿಕೆಗಳನ್ನು ಮುಸ್ಲಿಂ ಸಮುದಾ ಯಕ್ಕೆ ಬಿತ್ತುವ ಮೂಲಕ ಮತಬ್ಯಾಂಕ್ ಮಾಡಿಕೊಳ್ಳುತ್ತಿದೆ’ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇವಲ ಗ್ಯಾರಂಟಿ ವಿಚಾರ ಹೇಳುತ್ತಿದ್ದಾರೆ. ಸರಿಯಾಗಿ ಒಳ ಮೀಸಲಾತಿ ಜಾರಿ ಮಾಡದೇ ದಲಿತರಿಗೆ ಅನ್ಯಾಯ ಮಾಡಿದ್ದಾರೆ
ಕಾಂಗ್ರೆಸ್ನವರು ಯಾವತ್ತೂ ದಲಿತರ ಪರ ಇಲ್ಲ. ಬಿಜೆಪಿ ಸರ್ಕಾರ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮೀಸಲಾತಿ ಮಾಡಿದೆ. ಆದರೆ ಈ ಸರ್ಕಾರ ಎಸ್ಸಿ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಸದಾಶಿವ ಆಯೋಗ, ನಾಗಮೋಹನ್ ದಾಸ್, ಮಾಧುಸ್ವಾಮಿ ಅವರ ಶಿಫಾರಸು ಯಾವುದನ್ನು ಪರಿಗಣಿಸಿಲ್ಲ. ಕೇವಲ ಅಣ್ಣ&ತಮ್ಮಂದಿರು ಆಸ್ತಿ ಭಾಗ ಮಾಡಿಕೊಂಡಂತೆ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ವರ್ಗೀಕರಣವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ರಫಿ ಟೊಮೆಮೊ, ರಾಮ್‌ಜೀ, ಮೌಲಾ, ಸಲೀಂ, ಶಿವರಾಜ ತಳವಾರ ಇತರರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ