ಮುದಗಲ್ಲ :- ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ…

ಮುದಗಲ್ಲ ವರದಿ.

ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ…

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ :- ಅಜ್ಮೀರ್ ಬೆಳ್ಳಿಕಟ್..ಮುದಗಲ್ಲ :-ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ’ ಎಂದು ಪುರಸಭೆ ಯ ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ ಹೇಳಿದರು ಸರಕಾರಿ ಪ್ರೌಢ ಶಾಲೆ ಯ ಮೈದಾನದಲ್ಲಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕ ದಹಿಕ ಶಿಕ್ಷಣ ಪರಿವೀಕ್ಷಕ ಚನ್ನಪ್ಪ ಮೇಟಿ, ಡಾ. ಮಂಜುನಾಥ ಪಿಕಳಿಹಾಳ, ಮುಖ್ಯ ಗುರುಗಳು ನೀಲಪ್ಪ ಅಚನೂರು, ಶಿಕ್ಷಕ ಮಲ್ಲಪ್ಪ ದೇವರಗುಡಿ ಮಾತನಾಡಿದರು

ಕಸಾಪ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡರ್‌ ಮಾತನಾಡಿದ ಅವರು ಕ್ರೀಡಾ ಕೂಟದ ಮೂಲಕ ಶಿಸ್ತು ಸಂಯಮ
ಬೆಳೆಯುತ್ತದೆ, ಆರೋಗ್ಯ ವೃದ್ಧಿಗೆ ಕ್ರೀಡೆ ಪೂರಕವಾಗಿದೆ. ಪ್ರಾಥಮಿಕ ಹಂತದಲ್ಲಿ ವಿಧ್ಯಾರ್ಥಿಗಳು ವಿದ್ಯೆಯ ಜೊತೆಗೆ ಕ್ರೀಡೆಯಲ್ಲಿ ಭಾಗಿಯಾಗಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಹಿಸಬೇಕು ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾಗಿ ಉನ್ನತ ಮಟ್ಟಕ್ಕೆ ಹೋಗಲಿ ಎಂದು ಶುಭ
ಹಾರೈಸಿದರು.

ಈ ವೇಳೆ ಜೆಸ್ಕಾಂ ಅಧಿಕಾರಿ ಬನ್ನೆಪ್ಪ ಪೂಜಾರಿ ,SDMC ಅಧ್ಯಕ್ಷರಾದ ಪಾಲಾಕ್ಷರಾವ್ ದೇಶಪಾಂಡೆ , ಬದ್ರಿನಾಥ ಶೆಟ್ಟಿ,ಶಾಲಾ ಮುಖ್ಯ ಗುರುಗಳು ಮೊಹ್ಮದ ಶರೀಫ ನಿವೃತ್ತ ಹಿರಿಯ ದಹಿಕ ಶಿಕ್ಷಕ ಸುಕುಮಾರ(ಎಸ್ ಎನ್ ಅಕ್ಕಿ ) ಸಜ್ಜಲಗುಡ್ಡ ಪ್ರೌಢಶಾಲಾ ಮುಖ್ಯ ಗುರುಗಳು ಬಸ್ಸಪ್ಪ ಹಂದ್ರಾಳ, ಕಾರ್ಯಧರ್ಶಿ ತಮ್ಮಣ್ಣ ಗುತ್ತೇದಾರ, ಹಿರಿಯ ಪತ್ರಕರ್ತ ಅನಂತರಾವ್ ದೇಶಪಾಂಡೆ, ಶಿಕ್ಷಕ ರಾಮಚಂದ್ರ ಡವಳೆ,ಮಂಜನಾಥ ಬನ್ನಿಗೋಳರ ಹಸನ್ ಕವ್ವಾ,ಕರಿಯಪ್ಪಯಾದವ, ನಾಗರಾಜ ತಳವಾರ ವಿವಿಧ ಶಾಲಾ ಕ್ರೀಡಾ ಶಿಕ್ಷರಿದ್ದರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!