You are currently viewing BIG NEWS : ಶೀಘ್ರದಲ್ಲಿ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ : ಡಿ.ಕೆ ಶಿವಕುಮಾರ್

BIG NEWS : ಶೀಘ್ರದಲ್ಲಿ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ : ಡಿ.ಕೆ ಶಿವಕುಮಾರ್

ಪ್ರಜಾವೀಕ್ಷಣೆ ಸುದ್ದಿ :

BIG NEWS : ಶೀಘ್ರದಲ್ಲಿ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ : ಡಿ.ಕೆ ಶಿವಕುಮಾರ್

ಕೊಪ್ಪಳ : ತುಂಗಭದ್ರಾ ಆಣೆಕಟ್ಟಿನ ಟ್ರಸ್ಟ್ ಗೇಟ್ ರಿಪೇರಿ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದರು.

ಜಿಲ್ಲೆಯ ಬಸಾಪುರ ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡುತ್ತಾ ತುಂಗಭದ್ರಾ ಜಲಾಶಯ ಕುರಿತು ಚರ್ಚಿಸಲು ಆಂದ್ರಾ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮಯ ಕೇಳಿದ್ದೇನೆ. ಸಮಯ ನಿಗದಿಯಾದ ನಂತರ ನವಲಿ ಸಮನಾಂತರ ಜಲಾಶ ಮತ್ತು ಇತರೆ ವಿಷಗಳನ್ನು ಪ್ರಸ್ತಾಪಿಸಲಾಗುವುದು. ಆದಷ್ಟು ಬೇಗನೆ ತುಂಗಭದ್ರ ಗೇಟ್‌ಗಳ ದುರಸ್ಥಿ ಕೆಲಸಗಳನ್ನು ಮಾಡಲಾಗುವುದು. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕೆಂದು ಹೇಳಿದರು.

ಈ ವೇಳೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!