You are currently viewing KOPPAL NEWS : “ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ  ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್ ಅಭಿಮತ”   

KOPPAL NEWS : “ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ  ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್ ಅಭಿಮತ”   

“ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ  ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್ ಅಭಿಮತ”   

ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕೊಪ್ಪಳ :  ಪೈಗಂಬರ್ ಅವರು ಕ್ರೌರ್ಯ ಇಡೀ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಂದಿನ ಕಾಲಘಟ್ಟದೊಳಗ ಅವರು ಜೀವವಿರೋಧಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿರುವುದಿದೆಯಲ್ಲ ಅವರ ಈ ಜೀವಪರ ಕಾಳಜಿಯನ್ನು ನಾವು ಅದೇಷ್ಟು ಬಾರಿ  ಸ್ಮರಿಸಿದರು ಕಡಿಮೆಯೇಯಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್ ಹೇಳಿದರು.

 ಅವರು ನಗರದ ಹಟಗಾರ ಪೇಟೆ ಬಡಾವಣೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮದಿನದ ಅಂಗವಾಗಿ ಭ್ರಾತೃತ್ವ ಸಮಿತಿಯಿಂದ ನಡೆದ ಪ್ರವಾದಿಯವರ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.

  ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು, ಮೌಢ್ಯತೆ  ಹಾಗೂ ಜಾತಿಯತೆ ಅಳಿಯಬೇಕು. ಇಡೀ ಜಗತ್ತು ಹಸಿವು ಮುಕ್ತವಾಗಬೇಕು . ಶಾಂತಿ ಸೌಹಾರ್ದತೆ ಉಳಿಯಬೇಕು. ಇವು ಅವರ ಆಶಯವಾಗಿತ್ತು.  ಅಲ್ಲದೇ ಪ್ರವಾದಿ,  ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡು ಒಟ್ಟಾಗಿ ಬಾಳೋಣ .ಇನ್ನೂ ಹಲವು ಕಡೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸೌಹಾರ್ದತೆಯ ಅರಿವು ಮೂಡಿಸಲು  ಮುಂದೆ ಬರಬೇಕು ಎಂದು ಕರೆ ನೀಡಿದರು.

ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್ ,ಕಾರ್ಮಿಕ ಮುಖಂಡ  ಕೆ.ಬಿ.ಗೋನಾಳ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್   ಮತ್ತು ಮುಖಂಡ ಶರಣು ಗಡ್ಡಿ  ಅವರುಗಳು  ಮಾತನಾಡಿ,  ಪ್ರಜಾಪ್ರಭುತ್ವ ಇಲ್ಲದ ಹಳೆ ಕಾಲಘಟ್ಟದಲ್ಲಿ ಬಂದ ಪ್ರವಾದಿಗಳು ಜಗತ್ತಿಗೆ ಪ್ರೀತಿ ಕೊಟ್ಟಿದ್ದಾರೆ. ಪ್ರವಾದಿಗಳ ಹತ್ತಿರ ಪುರುಷರು, ಮಹಿಳೆಯರು ಯಾರೇ ಬಂದು ಎಂಥಾ ಜಟಿಲ ಪ್ರಶ್ನೆಗಳನ್ನು ಕೇಳಿದರೂ ಬಹಳ ಸರಳವಾಗಿ ಸಂಕ್ಷಿಪ್ತವಾಗಿ ಸ್ಪಷ್ಟ ಉತ್ತರ ಕೊಡುತ್ತಿದ್ದರು. ಮೊಹಮ್ಮದ್ ಪ್ರವಾದಿ ಅವರು ಹೇಳಿ ಕೊಟ್ಟಂತಹ ವಿಚಾರಗಳನ್ನು. ನಡೆದುಕೊಂಡಂತಹ ದಾರಿ ಮತ್ತು ಎಲ್ಲಾ ಧರ್ಮಗಳು ಹೇಳುವಂತಹ ಸೌಹಾರ್ದತೆಯ ಸಂದೇಶ ಹೆಚ್ಚೆಚ್ಚು ಜನರಿಗೆ ತಲುಪಿಸಬೇಕು ಎಂದು ಅಭಿಪ್ರಾಯಪಟ್ಟರು.

Prajavikshane

Chandru R Bhanapaur

Leave a Reply

error: Content is protected !!