ಕೊಪ್ಪಳ | ಎಐಡಿವೈಒ ನೇತೃತ್ವದಲ್ಲಿ ಖಗ್ರಾಸ್ ಚಂದ್ರ ಗ್ರಹಣ ವೀಕ್ಷಿಸಿದ ವಿದ್ಯಾರ್ಥಿ- ಯುವಜನರು | ವೈಚಾರಿಕತೆ ಬೆಳೆಸಿಕೊಳ್ಳಲು ಶರಣು ಪಾಟೀಲ್ ಕರೆ”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್ :
ಕೊಪ್ಪಳ : ಹುಣ್ಣಿಮೆ ದಿನವಾದ ಭಾನುವಾರ ಆಗಸದಲ್ಲಿ ರಾತ್ರಿ ಜರಗಿದ ಖಗ್ರಾಸ್ ಚಂದ್ರ ಗ್ರಹಣ ವನ್ನು ಕೊಪ್ಪಳದ ಕಾಳಿದಾಸ ನಗರದ ವೃತ್ತಿಪರ ಹಾಸ್ಟೆಲ್ನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎ ಐ ಡಿ ವೈ ಒ) ಯುವಜನ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿ ಯುವಕರು ಖಗ್ರಾಸ್ ಚಂದ್ರ ಗ್ರಹಣ ವೀಕ್ಷಣೆ ಕಾರ್ಯಕ್ರಮವನ್ನು ನಡೆಯಿತು.
ಈ ವೇಳೆ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, ನಮ್ಮ ಸೌರ ಮಂಡಲದಲ್ಲಿ ಸೂರ್ಯ ಮತ್ತು ಚಂದ್ರ ನಡುವೆ ಭೂಮಿ ಅಡ್ಡ ಬಂದು ಒಂದೇ ರೇಖೆ ಯಲ್ಲಿ ಮೂರು ಆಕಾಶ ಕಾಯಗಳು ಬಂದು ಸೇರಿದರೆ ಚಂದ್ರ ಗ್ರಹಣ ವಾಗುತ್ತದೆ. ಬಾನಂಗಳದಲ್ಲಾಗುವ ಸುಂದರ ವಿದ್ಯಮಾನವನ್ನು ಎಲ್ಲರೂ ನೋಡಿ ಸವಿಯಬೇಕು . 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತಿರುವುದು ಏಳು ವರ್ಷಗಳ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರ ಗ್ರಹಣ ಗೋಚರಿಸಿತು. ಹೀಗಾಗಿ ಸೂರ್ಯೋದಯ, ಸೂರ್ಯಸ್ಥ ರೀತಿ ಸೂರ್ಯಗ್ರಹಣ ಚಂದ್ರಗ್ರಹಣ ಆಗಸದಲ್ಲಿ ನಡೆಯುವದು ಸಹಜ ಪ್ರಕ್ರಿಯೆ ಎಂದರು.
ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕತೆ ಇತರ ವಿಷಯಗಳ ಕುರಿತು ತದ್ವಿರುದ್ಧವಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುವುದೆಲ್ಲ ಮಿತ್ಯ, ಜ್ಯೋತಿಷ್ಯಶಾಸ್ತ್ರ ಗರ್ಭಿಣಿಯರನ್ನು ಹೊರಗೆ ಬರಬಾರದೆಂದು, ಏನು ತಿನ್ನಬಾರದೆಂದು ಎಂದು ಹೇಳುತ್ತದೆ. ಗ್ರಹಣ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಏನು ಮಾಡಬೇಕೆಂದು ಪ್ರಶ್ನಿಸಿದರು. ಜ್ಯೋತಿಷ್ಯ ಶಾಸ್ತ್ರವು ಗ್ರಹಣ ಮುಗಿದ ಮೇಲೆ ಮನೆಯ ನೀರನ್ನ ಚೆಲ್ಲಿ ಎಂದು ಹೇಳುತ್ತದೆ. ಆಗದ್ರೆ ಸಮುದ್ರದ ನೀರು, ಕೆರೆಯ ನೀರು, ಹೊಳೆಯ ನೀರನ್ನು, ಎಲ್ಲಿ ಚೆಲ್ಲುವುದು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಎ ಐ ಡಿ ವೈ ಒ ಜಿಲ್ಲಾಧ್ಯಕ್ಷ ಆರ್.ವಿ.ಕಾಮನೂರ್, ಸದಸ್ಯರಾದ ಸುಭಾನ್, ಮತ್ತು ವಿದ್ಯಾರ್ಥಿಗಳಾದ ಉದಯ್, ಶಿವು, ಅಣ್ಣಪ್ಪ, ಮಲ್ಲೇಶ್, ಅಭಿ ಸೇರಿದಂತೆ 30ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.