SPECIAL STORY : ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ..!!

You are currently viewing SPECIAL STORY : ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ..!!

ಪ್ರಜಾ ವೀಕ್ಷಣೆಯ ಸೂಕ್ಷ್ಮ ನೋಟ :

SPECIAL STORY : ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಲ್ಲಿ ಅಕ್ರಮ : CEO ವರ್ಣೀತ್ ನೇಗಿ ಅವರು ಸೂಕ್ತ ಕ್ರಮಕ್ಕೆ ಆದೇಶ..!

 

 

 

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್‌-ಕೊಪ್ಪಳ (ಸೆ.13) : ಜಿಲ್ಲೆಯ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MAHATMA GANDHI NATIONAL RURAL EMPLOYMENT GUARANTEE SCHEME-MGNREGA)ಯಡಿ 2020 ರಿಂದ 2024ರ ಡಿಸೆಂಬರ್ 10ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಅಡಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡದೇ ಸರಕಾರಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ

ತಾಲೂಕಿನ 15 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರಕಾರಕ್ಕೆ ಜಮೆ ಮಾಡುವಂತೆ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಮುತ್ತು ತಂದೆ ಶರಣಪ್ಪ ದೊಡ್ಡಮನಿ ಅವರ ದೂರಿನ ಅನ್ವಯ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ ಅವರು, ತಾಲೂಕಿನ 15 ಗ್ರಾಮ ಪಂಚಾಯಿತಿಗಳ ವಿರುದ್ಧದ ದೂರು ಕುರಿತಂತೆ ನಿಯಮಾನುಸಾರ ಪರಿಶೀಲಿಸಿ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಜಮಾ ಮಾಡಲು ಅಗತ್ಯಕ್ರಮ ಕೈಗೊಳ್ಳುವಂತೆ ಕುಕನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಅವರಿಗೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಈ ಆದೇಶದಿಂದಾಗಿ ಕುಕನೂರು ತಾಲೂಕಿನ ಒಟ್ಟು 15 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದಂತೂ ಸತ್ಯ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕನೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಮಾಜಿ ಮತ್ತು ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಹಾಯಕರು ಮತ್ತು ಸಹಾಯಕ ನಿರ್ದೇಶಕರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆ ವರದಿಯಿಂದ 2020ರಿಂದ ಡಿಸೆಂಬರ್ 19, 2024ರ ವರೆಗೆ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡಿರುವುದಿಲ್ಲ ಎನ್ನುವುದಕ್ಕೆ ಸೂಕ್ತ ದಾಖಲಿಗಳಿವೆ ಎಂದು ಸಾಮಾಜಿಕ ಹೋರಾಟಗಾರ ಮುತ್ತು ದೊಡ್ಡಮನಿ ತಿಳಿಸಿದ್ದಾರೆ.

ಬಳಗೇರಿ,ಮಂಗಳೂರು, ಶಿರೂರು,ನೇಲಜರಿ,ಕೂದ್ರಿಮೋತಿ, ಮಸಬಹಂಚಿನಾಳ್, ತಲಕಲ್‌,ಭಾನಾಪೂರ, ರಾಜೂರು,ಮಂಡಲಗೇರಿ, ಇಟಗಿ, ಬನ್ನಿಕೋಪ್ಪ, ಯರೇಹಂಚಿನಾಳ, ಬೇಣಕಲ್‌, ಹೀರೆಬಿಡನಾಳ ಈ 15 ಗ್ರಾಮ ಪಂಚಾಯಿತಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತ 9,22,52,362 ರೂಪಾಯಿ (9.22 ಕೋಟಿ) ಸರಕಾರಕ್ಕೆ ಜಮಾ ಆಗಬೇಕಿರುವ ಹಣದ ರಾಶಿ ಇದಾಗಿದೆ.

ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯಿತಿ ಹಂತದಲ್ಲಿ ಈ ಮೂರು ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರೂಪಾಯಿ ಹಣ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒಳಗೊಂಡಂತೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು (ನರೇಗಾ) ಮತ್ತು ತಾಲೂಕು ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಾಮೂಹಿಕ ಲೆಕ್ಕಪರಿಶೋಧನೆ ಇವರ ಜೇಬು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.

ಈ ವಿಷಯದ ಕುರಿತು ಸರಣಿ ಸುದ್ದಿಗಾಗಿ ನಿರೀಕ್ಷಿಸಿ….. ನಿಮ್ಮ ಪ್ರಜಾವೀಕ್ಷಣೆ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಮಾತ್ರ..!!

Leave a Reply

error: Content is protected !!