You are currently viewing LOCAL NEWS : ಕಲ್ಯಾಣ ಕರ್ನಾಟಕ ಉತ್ಸವ : ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ : ಉಪನ್ಯಾಸಕ ಶರಣಪ್ಪ ಉಮಚಗಿ

LOCAL NEWS : ಕಲ್ಯಾಣ ಕರ್ನಾಟಕ ಉತ್ಸವ : ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ : ಉಪನ್ಯಾಸಕ ಶರಣಪ್ಪ ಉಮಚಗಿ

ಪ್ರಜಾವೀಕ್ಷಣೆ ಸುದ್ದಿ :

LOCAL NEWS : ಕಲ್ಯಾಣ ಕರ್ನಾಟಕ ಉತ್ಸವ : ವಿಮೋಚನಾ ಹೋರಾಟದಲ್ಲಿ ರಕ್ತಸಿಕ್ತ ಚರಿತ್ರೆ : ಉಪನ್ಯಾಸಕ ಶರಣಪ್ಪ ಉಮಚಗಿ

ಕುಕನೂರು : ‘ನಿಜಾಮನ ಆಳ್ವಿಕೆ ವಿರುದ್ಧ ಸ್ವಾಮಿ ರಮಾನಂದ ತೀರ್ಥರಂತಹ ನಾಯಕರ ನೇತೃತ್ವದಲ್ಲಿ ವಿಮೋಚನಾ ಹೋರಾಟಗಳಲ್ಲಿ ರಕ್ತಸಿಕ್ತ ಚರಿತ್ರೆ ನಡೆದು ಇತಿಹಾಸ ಪುಟ ಸೇರಿವೆ ಎಂದು ಕೆಎಲ್‌ಇ ಕಾಲೇಜು ಇತಿಹಾಸ ಉಪನ್ಯಾಸಕ ಶರಣಪ್ಪ ಉಮಚಗಿ ತಿಳಿಸಿದರು.

ಇಂದು ಕುಕನೂರು ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ನಡೆದ 78ನೇ ಕಲ್ಯಾಣ ಕರ್ನಾಟಕ ಉತ್ಸವದ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್‌ ಹೆಚ್‌ ಪ್ರಾಣೇಶ್‌ ಅವರು ನೇರವೆರಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ಅಂದಿನ ಹೈದ್ರಾಬಾದ್‌ ಕರ್ನಾಟಕದ ಸ್ಥಿತಿಗತಿ ಹಾಗೂ ವಿಮೋಚನೆಗಾಗಿ ನಡೆದ ಹೋರಾಟಗಳ ಬಗ್ಗೆ ವಿವರವಾಗಿ ತಿಳಿಸಿದರು.

“ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ, ನಿಜಾಮರ ಆಳ್ವಿಕೆಯಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶವು 1948ರವರೆಗೂ ಸ್ವಾತಂತ್ರ್ಯ ಪಡೆಯಲಿಲ್ಲ. ಬರೋಬ್ಬರಿ 13 ತಿಂಗಳ ಬಳಿಕ ಸ್ವಾತಂತ್ರ್ಯ ಪಡೆದೇವು, ಅದು ಈ ಪ್ರದೇಶದ ಜನರು ನಿಜಾಮರ ದಬ್ಬಾಳಿಕೆ, ಅರಾಜಾಕತೆ ದುರಂತಗಳ ಮತ್ತು ರಕ್ತಸಿಕ್ತ ಹೋರಾಟದ ಮೂಲಕ ವಿಮೋಚನೆ ಪಡೆಯಲಾಯಿತು ಎಂದರು.

 

‘ಗೋರ್ಟಾ ಗ್ರಾಮದ ಹತ್ಯಾಕಾಂಡದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಹಿಂದೂಗಳ ಮಾರಣಹೋಮವಾಗಿದ್ದು, ಘನಘೋರ ದುರಂತ ಇತಿಹಾಸವಾಗಿದೆ. ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹಸ್ತಕ್ಷೇಪದೊಂದಿಗೆ “ಆಪರೇಷನ್‌ ಫೋಲೋ” ಮೂಲಕ ವಿಮೋಚನೆ ಸಾಧಿಸಲಾಯಿತು. ಇದು ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ನಡೆದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವ ಒಂದು ಪ್ರಮುಖ ದಿನವಾಗಿದೆ ‘ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಹೆಚ್‌ ಪ್ರಾಣೇಶ್‌, ತಾಲೂಕ ಪಂಚಾಯಿತಿ ಯೋಜನಾ ಅಧಿಕಾರಿ ಆನಂದ್‌ ಕುಮಾರ್‌, ಗ್ರೇಡ್‌ 2 ತಹಶೀಲ್ದಾರ್‌ ಮುರಳಿಧರ್‌ ರಾವ್‌, ಎಪಿಎಂಸಿಯ ಕಾರ್ಯಧರ್ಶಿ ಗುರುಸ್ವಾಮಿ ಗುಡಿ, ಸರ್ಕಾರಿ ಫ್ರೌಡ ಶಾಲೆ ಕುಕನೂರು ಮುಖ್ಯೋಪಾಧಯ ಎ ಹೆಚ್‌ ಮುತ್ತಣ್ಣ, ನಿವೃತ್ತ ಅಕ್ಷರ ದಾಸೋಹ ಅಧಿಕಾರಿ ಅಶೋಕ ಪತ್ತಾರ, ತಾಲೂಕಾ ಖಾಜಾನೆ ಅಧಿಕಾರಿ ಮೋಹನ್‌ ಕುಮಾರ್, ಕೆಎಲ್‌ಇ ಕಾಲೇಜು ಪ್ರಿನ್ಸಿಪಾಲ್ ಅರುಣ್‌ ಕುಮಾರ್‌, ದೈಹಿಕ ಶಿಕ್ಷಕ ಎಸ್‌ಎಂ ಹಿರೇಮಠ್, ಸಿಆರ್‌ಪಿ ಪೀರ್‌ಸಾಬ್‌ ದಫೇದಾರ್‌ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕಲ್ಯಾಣ ಕರ್ನಾಟಕ ಉತ್ಸವದ ಕುರಿತು ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರಾದ ಮೇಘಾ ಭೀಮನಕಟ್ಟಿ, ಪಲ್ಲವಿ ಆರೆರ್, ಭಾಷಣ ಮಾಡಿದರು. ಈ ವೇಳೆ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ದೇಶಭಕ್ತಿ ಕುರಿತು ಸಾಂಸ್ಕೃತಿಕ ನೃತ್ಯ ಏರ್ಪಡಿಸಲಾಗಿತ್ತು.

Leave a Reply

error: Content is protected !!