You are currently viewing LOCAL NEWS :”ಯಲಬುರ್ಗಾ |  ಸಂಶೋಧಕ ಹುಸೇನಸಾಬ ವಣಗೇರಿ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ”

LOCAL NEWS :”ಯಲಬುರ್ಗಾ |  ಸಂಶೋಧಕ ಹುಸೇನಸಾಬ ವಣಗೇರಿ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ”

“ಯಲಬುರ್ಗಾ| ಸಂಶೋಧಕ ಹುಸೇನಸಾಬ  ವಣಗೇರಿ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ”

• ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ :

 ಯಲಬುರ್ಗಾ :  ತಾಲೂಕಿನ ಮುಧೋಳ ಗ್ರಾಮದ ನಿವಾಸಿ,  ಕವಿ ಮತ್ತು ಸಂಶೋಧಕ  ಹುಸೇನಸಾಬ ವಣಗೇರಿ ಅವರು ಮಂಡಿಸಿದ “ಹೆಲ್ತ್ ಕಂಡಿಷನ್ಸ್ ಆಂಡ್ ಹೆಲ್ಕಕೇರ್‌ ಸರ್ವಿಸಸ್ ಯುಟಿಲೈಜೆಶನ್ ಅಮಂಗ್ ಎಲ್ಬರ್ಲಿ ಪೀಪಲ್ ಲಿವಿಂಗ್ ವಿಥ್ ಕ್ರೋನಿಕ್ ಡಿಸೀಸಸ್” ಎಂಬ ಮಹಾಪ್ರಬಂಧಕ್ಕೆ  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ  ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.

ಇವರಿಗೆ  ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರೇಣುಕಾ ಈ. ಅಸಗಿ ಅವರು ಮಾರ್ಗದರ್ಶನ ಮಾಡಿದ್ದಾರೆ.

ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಹುಸೇನಸಾಬ ವಣಗೇರಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಉತ್ತಮ ಸಂಶೋಧನಾ ವಿದ್ಯಾರ್ಥಿ ಎಂದು ಚಿನ್ನದ ಪದಕ ಪಡೆದುಕೊಂಡಿದ್ದು, ಇದುವರೆಗೆ ಎದೆಗಂಟಿದ ವಿರಹ ಕವನ ಸಂಕಲನ, ಕಾರ್ಮಿಕ ಕಾನೂನುಗಳ ಅರಿವು ಮತ್ತು ಅಂತರಂಗದ ಬೆಳಕು ಎಂಬ ಮೂರು ಕೃತಿಗಳು ಪ್ರಕಟವಾಗಿವೆ.

ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನ ಪ್ರದಾನ ಮಾಡಿದ್ದಕ್ಕೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನೇಹಿತರು ಹಾಗೂ ಊರಿನ ಗ್ರಾಮಸ್ಥರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ

Prajavikshane

Chandru R Bhanapaur

Leave a Reply

error: Content is protected !!