You are currently viewing LOCAL BREAKING : ಕುಕನೂರಿನಲ್ಲಿ ಬೀಕರ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಮೃತ..!

LOCAL BREAKING : ಕುಕನೂರಿನಲ್ಲಿ ಬೀಕರ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಮೃತ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL BREAKING : ಕುಕನೂರಿನಲ್ಲಿ ಬೀಕರ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಮೃತ..!

ಕುಕನೂರು : ಪಟ್ಟಣದ ಜವಾಹರ ನವೋದಯ ಶಾಲೆಯ ಹತ್ತಿರ ಭೀಕರ ರಸ್ತೆ ಅಪಘಾತವಾಗಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ReNew ಕಂಪನಿಯ ಕೂಲಿ ಕಾರ್ಮಿಕ ತಮ್ಮ ಕೆಲಸ ಮುಗಿಸಿ ಕುಕನೂರಿನಿಂದ ಗುದ್ನೇಪ್ಪನ ಮಠದ ಕಡೆಗೆ ಹೋಗುವ ವೇಳೆ ಚಲಿಸುತ್ತಿರುವ ಟ್ಯಾಕ್ಟರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿ ಪಶ್ಚಿಮ ಬಂಗಾಳದ ಕಲ್ಕತ್ತಾ ಮೂಲದವನು ಪಾರಿತೋಷ್ ಬಸಕ್ (ವಯಸ್ಸು 40 ವರ್ಷ) ಎಂದು ಗುರುತಿಸಲಾಗಿದೆ.

 

ಮೃತನು ಕಳೆದ ಎರಡು ವರ್ಷಗಳಿಂದ ಪಟ್ಟಣದ ಗುದ್ನೇಪ್ಪನ ಮಠದಲ್ಲಿರುವ ReNew ಕಂಪನಿಯ ಮೆಟಿರೀಯಲ್ಸ್ ಸ್ಟೋರ್‌ನಲ್ಲಿ ಹೈಟೆಸನ್‌ ಪವರ್‌ ಟವರ್‌ ಕೂಲಿ ಕಾರ್ಮಿಕನಾಗಿದ್ದನು ಎನ್ನಲಾಗಿದೆ. ಈ ಪ್ರಕರಣವೂ ಕುಕನೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Prajavikshane

Chandru R Bhanapaur

Leave a Reply

error: Content is protected !!