You are currently viewing LOCAL NEWS : ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಬ್ದಾರಿ : ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ

LOCAL NEWS : ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಬ್ದಾರಿ : ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಬ್ದಾರಿ : ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ

ಕುಕನೂರು : ‘ಎಲ್ಲಾ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳನ್ನು ತಲುಪಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಜವಬ್ದಾರಿ’ ಎಂದು ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಅಧಿಕಾರಿಗಳಿಗೆ ಕರೆ ನೀಡಿದರು.

ಇಂದು ಕುಕನೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಕನೂರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್‌ ಗುತ್ತಿ ಅಧ್ಯಕ್ಷತೆಯಲ್ಲಿ *ಗ್ಯಾರಂಟಿ ಯೋಜನೆಗಳ ನಡೆ ಪಟ್ಟಣ ಪಂಚಾಯತಿ ಕಡೆ*-ಕುಕನೂರ ಪಟ್ಟಣ ಪಂಚಾಯತಿ ಮಟ್ಟದ ಮೇಲ್ವಿಚಾರಣಾ ಸಭೆ ನಡೆಯಿತು.

ಈ ಕುರಿತು ಮಾತನಾಡಿದ ಅವರು, ‘ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹ ಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳು ಪಟ್ಟಣದ ಪ್ರತಿಯೊಂದು ವಾರ್ಡ್‌ನಲ್ಲಿ ಈ ಪಂಚ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅರ್ಹ ಫಲಾನುಭವಿಗೆ ಮತ್ತು ತಾಲೂಕಿನ ಕಟ್ಟ ಕಡೆ ವ್ಯಕ್ತಗೂ ತಲುಪಬೇಕು. ಈ ಯೋಜನೆಗಳ ಅನುಷ್ಠಾನಕ್ಕಾಗಿ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ವಾರ್ಡ್‌ಗಳ ಅಂಗನವಾಡಿ ಕಾರ್ಯಕರ್ತೆಯರು ಜನ ಸಾಮಾನ್ಯನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಗೃಹಲಕ್ಷ್ಮೀ ನೊಂದಣಿಯಲ್ಲಿ 60,783 ಫಲಾನುಭವಿಗಳಲ್ಲಿ 60,799 ಫಲಾನುಭವಿಗಳಿಗೆ ಯೋಜನೆ ತಲುಪಿದೆ, ಈ ಯೋಜನೆಯಲ್ಲಿ ಶೇಕಡಾ 99% ಸಾಧನೆ ಮಾಡಲಾಗಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರು, ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ. ಶಕ್ತಿ ಯೋಜನೆಯ ನೆಪದಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕಕೊಳ್ಳಬೇಕು ಎಂದರು.

ಮಹಿಳೆಯರ ಜೊತೆಗೆ ಚಾಲಕರು ಹಾಗೂ ನಿರ್ವಾಹಕರು ಸಭ್ಯ ವರ್ತನೆಯಿಂದ ಸ್ಪಂದಿಸಬೇಕು, ಪದವಿಧರ ಯುವ ನಿರೂದ್ಯೋಗಿಗಳಿಗೆ ಯುವ ನಿಧಿ ಒಳ್ಳೆಯ ಆರ್ಥಿಕ ಸಹಾಯ ನೀಡಲಿದೆ. ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗಳು ಜನರ ಜೀವನಮಟ್ಟ ವನ್ನು ಸುಧಾರಿಸಿವೆ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್, ತಹಶೀಲ್ದಾರ್‌ ಪ್ರಾಣೇಶ್ ಎಚ್, ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಾಸೀಮ್ ಸಾಬ್ ತಳಕಲ್‌, ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಸಿಡಿಪಿಓ ಬೇಟದಪ್ಪ ಮಾಳೆಕೊಪ್ಪ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಬೀಸಾಬ್‌ ಕಂದಗಲ್‌, ಪಟ್ಟಣ ಪಂಚಾಯಿತಿ ಸದಸ್ಯರು, ಗ್ಯಾರಂಟಿ ಯೊಜನೆಯ ಅನುಷ್ಠಾನ ಸಮಿತಿ ಸದಸ್ಯರು, 5 ಯೊಜನೆಗಳ ಅನುಷ್ಠಾನ ಅಧಿಕಾರಿಗಳು, ಅಂಗನವಾಡಿ ಸಹಾಯಕಿರು, ಮಹಿಳಾ ಫಲಾನುಭವಿಗಳು ಹಾಜರಿದ್ದರು.

Leave a Reply

error: Content is protected !!