LOCAL NEWS : ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸದ ಸರ್ಕಾರದ ವಿರುದ್ಧ ಬಿಜೆಪಿಯಿಂದ “ರಸ್ತಾ ರೋಕೋ” ಪ್ರತಿಭಟನೆ!
ಕುಕನೂರು : ದೇಶದಲ್ಲಿಯೇ ಕರ್ನಾಟಕ ರಾಜ್ಯವು ಭ್ರಷ್ಟಾಚಾರದಿಂದ ನಲಗುತ್ತಿದ್ದು, ನಂಬರ್ ಒನ್ ಭ್ರಷ್ಟಾಚಾರ ರಾಜ್ಯ ಎಂಬ ಅಪಕೀರ್ತಿಗೆ ರಾಜ್ಯ ಸರ್ಕಾರ ಕಾರಣವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಪ್ರಮುಖ ಮಂಜುನಾಥ ನಾಡಗೌಡ ಹೇಳಿದರು.
ಪಟ್ಟಣದ ಗುದ್ನೆಪ್ಪನ ಮಠ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಯಲಬುರ್ಗಾ ಮಂಡಲ ಹಾಗೂ ಯಲಬುರ್ಗಾ ಕುಕುನೂರು ತಾಲೂಕ ಜಾತ್ಯಾತೀತ ಜನತಾದಳದ ವತಿಯಿಂದ ರಸ್ತೆಯಲ್ಲಿರುವ ಗುಂಡಿಗಳನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ರಸ್ತೆ ದುರಸ್ತಿಗೊಳಿಸಿ, ಜನರ ಜೀವ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಪಕ್ಷದ ಪ್ರಮುಖರಾದ ಮಂಜುನಾಥ ನಾಡಗೌಡ ಮಾತನಾಡುತ್ತಾ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ಶಾಸಕ ನಮ್ಮ ಯಲಬುರ್ಗಿ ಕ್ಷೇತ್ರದವರಾಗಿದ್ದು ಅವರ ಹೇಳಿಕೆಯಂತೆ ಭ್ರಷ್ಟಾಚಾರ ದೇಶಾದ್ಯಂತ ತಾಂಡವ ಆಡುತ್ತಿದ್ದು ಅದರಲ್ಲಿಯೂ ಕರ್ನಾಟಕ ನಂಬರ್ ಒನ್ ಸ್ಥಾನಕ್ಕೇರಿದೆ ಎಂದು ಹೇಳಿಕೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ರಾಜ್ಯದಲ್ಲಿ ಇಂತಹ ದುಸ್ಥಿತಿ ತಲುಪಲು ತಮ್ಮದೇ ಆದ ಸರಕಾರ ಕಾರಣ ಎಂಬುದನ್ನು ಮಾತ್ರ ಅವರು ಮರೆಮಾಚಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯದ ಜನತೆಗೆ ಬೆಲೆ ಏರಿಕೆ ಸೇರಿದಂತೆ ಎಲ್ಲಾ ತರಹದ ಬರೆ ಎಳೆಯುತ್ತಿದ್ದು ರಾಜ್ಯಾದ್ಯಂತ ಯಾವುದೇ ಅಭಿವೃದ್ಧಿ ಪರ ಕಾರ್ಯಗಳು ಜರುಗುತ್ತಿಲ್ಲ. ಇದನ್ನ ಯಾರಾದರೂ ಪ್ರಶ್ನಿಸಿದರೆ ಪಂಚ ಗ್ಯಾರಂಟಿ ನೀಡುತ್ತೇವೆ ಎಂದು ಹೇಳುತ್ತಿದ್ದು ಇಂತಹ ಬ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಬಿಸಿ ಮುಟ್ಟಿಸುವಂತಹ ಪಂಚ ಗ್ಯಾರಂಟಿಯನ್ನು ರಾಜ್ಯದ ಯಾವ ಜನತೆಯು ವ್ಯಕ್ತಿಯು ಕೇಳಿರಲಿಲ್ಲ ಅಧಿಕಾರ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಭರವಸೆ ನೀಡಿ ಅದನ್ನು ಅನುಷ್ಠಾನ ತರುತ್ತದೆ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ರಾಜ್ಯದ್ಯಂತ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿದ್ದು ಇಂತಹ ಗುಂಡಿಗಳಿಂದ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದು ನಾವು ಪ್ರತಿಭಟಿಸುತ್ತಿರುವ ಸ್ಥಳದಲ್ಲಿಯೇ ಕಳೆದ ಕೆಲವು ದಿನಗಳ ಹಿಂದೆ ಒಬ್ಬ ಕಾರ್ಮಿಕ ಈ ರಸ್ತೆಗೆ ಬಲಿಯಾಗಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ನಿರ್ವಹಣೆ ಎಂದರು.
ರಾಜ್ಯದಲ್ಲಿ ಎಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿವೆ ಎಂದರೆ ಇದಕ್ಕೆ ಸ್ವಪಕ್ಷಯರಿಂದಲೇ ಹಲವಾರು ದೂರುಗಳು ಮುಖ್ಯಮಂತ್ರಿಗಳಿಗೆ ತಲುಪಿದ್ದು ರಾಜ್ಯ ಸರ್ಕಾರ ಎರಡೂವರೆ ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೆ ಸಭೆಯಲ್ಲಿ ರಸ್ತೆ ನಿರ್ಮಿಸಿ ಎಂದ ರೈತರಿಗೆ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡಿ ರಸ್ತೆ ನಿರ್ಮಿಸುತ್ತೇನೆ ಎಂದು ವಾಸ್ತವದ ಸ್ಥಿತಿಯನ್ನು ಬಸವರಾಜ ರಾಯರೆಡ್ಡಿ ಅವರು ಹೇಳಿದ್ದು ದಿನ ಕಲೆಯುತ್ತಿದ್ದಂತೆಯೇ ತಮ್ಮ ಹೇಳಿಕೆಗೆ ಉಲ್ಟಾ ಪ್ರತಿಕ್ರಿಯೆ ನೀಡಿರುವುದು ಆಶ್ಚರ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯವನ್ನು ಕತ್ತಲಲ್ಲಿ ಕಾಲ ಕಳೆಯುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡುತ್ತಾ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಭ್ರಷ್ಟಾಚಾರದಲ್ಲಿ ಮುಗುಗಿದ್ದು ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದರೆ ಬೆದರಿಕೆಯ ಕರೆಗಳು ಬರುತ್ತಿದ್ದು ಇನ್ನೂ ಮುಂದುವರೆದರೆ ಪೊಲೀಸರಿಂದ ಎಫ್ಐಆರ್ ಮಾಡಿಸಿ ರೌಡಿಶೀಟರ್ ಪಟ್ಟ ಕಟ್ಟುತ್ತಿರುವುದು ನಿಜಕ್ಕೂ ಸರ್ಕಾರ ನಡೆಸುತ್ತಿರುವವರ ಮುಖವಾಡ ಕಳಚಿ ಅಸಲಿತನವನ್ನು ತೋರಿಸುವಂತಿದೆ. ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆಗಿರುವ ಬಸವರಾಜ ರಾಯರೆಡ್ಡಿ ಅವರು ಕ್ಷೇತ್ರದ ವಾಸ್ತವ ಸ್ಥಿತಿಗತಿ ತಿಳಿದುಕೊಂಡು ಹೆಜ್ಜೆ ಇಡಲಿ. ಕೇವಲ ಬೆಂಗಾಲು ಪಡೆ ವಾಹನದ ಹಿಂದೆ ಸುತ್ತಾಡುತ್ತಾ ಇದ್ದರೆ ವಾಸ್ತವ ಸ್ಥಿತಿಗತಿ ಅರ್ಥವಾಗುವುದಿಲ್ಲ. ವಾಸ್ತವಂಶವನ್ನು ತಿಳಿದು ರಸ್ತೆ ಗುಂಡಿಗಳಿಗೆ ಕನಿಷ್ಠ ಪ್ಯಾಚ್ ಮಾಡಿಸುವ ಕಾರ್ಯ ಮಾಡಲಿ ಎಂದು ಹೇಳಿದರು.
ಜಾತಿ ಗಣತಿಯಲ್ಲಿ ಧರ್ಮದ ಹೆಸರನ್ನೇ ಬರಿಸುವುದಿಲ್ಲ ಎಂಬ ಹೇಳಿಕೆ ನೀಡಿರುವ ಶಾಸಕರು ತಮ್ಮ ಶಾಲಾ ದಾಖಲೆಗಳನ್ನು ಬಹಿರಂಗವಾಗಿ ಪ್ರದರ್ಶಿಸತಲಿ ಅದರಲ್ಲೂ ಸಹ ಜಾತಿ ಹೆಸರನ್ನು ಹಾಕದೆ ಇದ್ದಾರೆ ಎಂಬ ಧರ್ಮವನ್ನು ಬರೆಸದೆ ಇದ್ದರೆ ಎಂಬ ಸತ್ಯಾಂಶ ಬಯಲಾಗುತ್ತದೆ ಎಂದು ಹೇಳುತ್ತಾ ಭ್ರಷ್ಟಾಚಾರದಿಂದ ಇಡೀ ಕ್ಷೇತ್ರ ಅವನತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಭಾರತೀಯ ಜನತಾ ಪಕ್ಷದ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗೌರಾಳ, ಪ್ರಮುಖರಾದ ಅನಿಲ್ ಆಚಾರ ಅಮರೇಶ್ ಹುಬ್ಬಳ್ಳಿ, ನಾಗರಾಜ ವೆಂಕಟಪುರ, ಶಿವಕುಮಾರ್ ನಾಗಲಾಪುರ ಮಠ, ಸಿದ್ದಯ್ಯ ಉಳ್ಳಾಗಡ್ಡಿ, ಮಹಾಂತೇಶ್ ಹೂಗಾರ್, ಶರಣಪ್ಪ ಈಳಿಗೆರ, ಪ್ರಕಾಶ್ ತಹಸಿಲ್ದಾರ್, ಮಹಾಂತೇಶ್ ಹೂಗಾರ್, ಶಿವರಾಜ ಗೌಡ, ಬಸವರಾಜ್ ಹಾಳಕೇರಿ, ಮಹೇಶ್ ಕಲ್ಮಠ, ಲಕ್ಷ್ಮಣ್ ಕಾಳಿ, ಮುತ್ತು ತಳವಾರ,ಪ್ರಾಣೇಶ್ ಬತ್ತಿ, ಶಂಕರ್, ಪ್ರವೀಣ ಬಿಡ್ನಾಳ, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ಭಾರತೀಯ ಜನತಾ ಪಕ್ಷ ಪ್ರತಿಭಟನೆ ವಿಷಯಕ್ಕೆ ಕುರಿತಂತೆ ವರದಿಗಾರರಿಗೆ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಪ್ರತಿಕ್ರಿಯೆ ನೀಡಿದರು. ‘ಬಿಜೆಪಿ ವತಿಯಿಂದ ರಸ್ತೆ ಗುಂಡಿಗಳ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆ ಒಳ್ಳೆಯ ವಿಷಯ, ಈ ರಸ್ತೆ ನಿರ್ಮಾಣ ಈಗಿನ ಶಾಸಕ ಬಸವರಾಜ ರಾಯರೆಡ್ಡಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಅಂದರೆ ಭಾರತೀಯ ಜನತಾ ಪಕ್ಷದ ಪ್ರಮುಖರಾದ ಹಾಲಪ್ಪ ಆಚಾರ್ ಅವರು ಶಾಸಕ ಹಾಗೂ ಸಚಿವರಾಗಿದ್ದಾಗ ಅವಧಿಯಲ್ಲಿ ನಿರ್ಮಾಣಗೊಂಡ ರಸ್ತೆಯಾಗಿದ್ದು, ಅಂದು ಕಳಪೆ ಗುಣಮಟ್ಟದಿಂದ ರಸ್ತೆ ನಿರ್ಮಾಣವಾಗಿದೆ ಎಂದು ಕಳಪೆ ಗುಣಮಟ್ಟದ ರಸ್ತೆಗಳಲ್ಲಿ ಸಸಿ ನೆಡುವುದರ ಮೂಲಕ ಕುಕನೂರು ತಾಲೂಕ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿದ್ದು ಇಂದು ಸ್ಮರಣೀಯವಾಗಿದೆ ಎಂದರು.
‘ಬಿಜೆಪಿಯ ಮಿತ್ರರು 2013ರಿಂದ 2018ರ ಅವಧಿಯಲ್ಲಿ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಅವರ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡ ರಸ್ತೆಗಳನ್ನು ಹಾಗೂ 2018 ರಿಂದ 2023 ರ ವರೆಗೆ ಶಾಸಕರಾಗಿದ್ದ ಹಾಲಪ್ಪ ಆಚಾರ ಅವರ ಅವಧಿಯಲ್ಲಿ ನಿರ್ಮಾಣವಾದ ರಸ್ತೆಗಳನ್ನು ದಾಖಲಾತಿ ಸಮೇತ ಗುಣಮಟ್ಟಗಳನ್ನು ಪರಿಶೀಲಿಸಿ ಮನವರಿಕೆ ಮಾಡಿಕೊಳ್ಳಲಿ’ ಎಂದು ಹೇಳಿದರು.