ಮುದಗಲ್ಲ :- ಕಿಲಾರಹಟ್ಟಿ ದಸರಾ ಪ್ರೀಮಿಯರ್ ಕ್ರಿಕೆಟ್ ಲೀಗ್ : ಶಿವಶಂಕರಗೌಡ ಚಾಲನೆ…
ಮುದಗಲ್ :- ಸಮೀಪದ ಕಿಲಾರ ಹಟ್ಟಿ ಗ್ರಾಮದಲ್ಲಿ ಸರ್ಕಾರಿ ನೌಕರ ಬಳಗದ ವತಿಯಿಂದ ಆಯೋಜಿಸಿದ್ದ ದಸರಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ ಗೌಡ ಪಾಟೀಲ್ ಅವರು ಚಾಲನೆ ನೀಡಿದರು. ಗ್ರಾಮದಲ್ಲಿ ಸುಮಾರು 70 ಜನ ಸರ್ಕಾರಿ ನೌಕರರ ಇದ್ದು ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಬೇರೆ ಬೇರೆ ಕಡೆ ಸರ್ಕಾರಿ ನೌಕರಿಯಲ್ಲಿ ಇರುವ ಗ್ರಾಮದ ಯುವಕರು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸುತ್ತಾರೆ.
ಕೀಲರ ಹಟ್ಟಿ ಗ್ರಾಮವು ಸಣ್ಣ ಗ್ರಮವಾಗಿದ್ದರು ಇಲ್ಲಿನ ಯುವಕರು ಉತ್ತಮವಾಗಿ ಅಭ್ಯಾಸ ಮಾಡಿ ಸರ್ಕಾರಿ ನೌಕರಿ ಪಡೆದು ಊರಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ಈಗಿನ ವಿದ್ಯಾರ್ಥಿಗಳು ಕೂಡ ಆಟದ ಜೊತೆಗೆ ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿ ಹಿರಿಯ ನೌಕರರ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಜೆಲ್ಲಿ ಅವರು ಮಾತನಾಡಿ ಕ್ರೀಡೆಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಉತ್ತಮಪಡಿಸಲು ಸಹಕಾರಿಯಾಗಿದ್ದು ಎಲ್ಲರೂ ಕ್ರೀಡಾ ಸ್ಪೂರ್ತಿಯಿಂದ ಆಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯುವಕ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಶ್ರೀ ಅಮರೇಶ್ ಹಾವಿನ, Dr . ಮಂಜುನಾಥ್ ಹಟ್ಟಿ, ಶರಣಬಸವ RTO ಅಧಿಕಾರಿ, ಪ್ರೌಢ ಶಾಲೆ ಶಿಕ್ಷಕ ಹನಮನಗೌಡ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಬೀರಪ್ಪ, ಅಮರೇಶ್ ಗೋರ್ಬಾಳ, ಪ್ರೇಮ್ ಸಿಂಗ್,, ಎಸ್. ಡಿ.ಎಂ ಸಿ ಅಧ್ಯಕ್ಷರಾದ ನಾಗನಗೌಡ ಪಾಟೀಲ್, ಊರಿನ ಯುವಕರಾದ ವಸಂತ್ ತುಂಬದ , ಬಸವರಾಜ ಬೂದಿ ,ಸೋಮನೋಗೌಡ, ಹೋಳಿಯಪ್ಪಾ ತುಂಬದ ಇತರ ಯುವಕರು ಹಾಜರಿದ್ದರು..
ವರದಿ:-ಮಂಜುನಾಥ ಕುಂಬಾರ..