FLASH NEWS : ಸಿಎಂಗೆ ಮನವಿ ನೀಡಲು ಬಂದ ರೈತರ ಬಂಧನ!

ರೈತ ವಿರೋಧಿ ಸರಕಾರಕ್ಕೆ ದಿಕ್ಕಾರ ಹಾಕಿದ ರೈತರು. ರಾಜ್ಯ ಸರಕಾರದ ವಿರುದ್ಧ ರೈತರ ಘೋಷಣೆ

ಕೊಪ್ಪಳ ಅ. 6 : ಇಂದು ಕೊಪ್ಪಳ ಕ್ಕೆ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆಗೆ ಬಂದಾಗ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ರಾಜ್ಯ ರೈತ ಸಂಘದವರು ಮನವಿ ನೀಡಲು ಬಂದ ರೈತರನ್ನು ಪೊಲೀಸರು ಬಂಧಿಸಿ ಅವರನ್ನು ತಮ್ಮ ವಾಹನಗಳಲ್ಲಿ ಬಲವಂತವಾಗಿಯೇ ಕೂರಿಸಿದರು, ಈ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
