You are currently viewing LOCAL NEWS : ಮಹಾತ್ಮ ಗಾಂಧಿ ಸದ್ಭಾವನಾ ಪ್ರಶಸ್ತಿಗೆ ಸುರೇಶ್ ಬಳೂಟಗಿ ಆಯ್ಕೆ..!

LOCAL NEWS : ಮಹಾತ್ಮ ಗಾಂಧಿ ಸದ್ಭಾವನಾ ಪ್ರಶಸ್ತಿಗೆ ಸುರೇಶ್ ಬಳೂಟಗಿ ಆಯ್ಕೆ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಮಹಾತ್ಮ ಗಾಂಧಿ ಸದ್ಭಾವನಾ ಪ್ರಶಸ್ತಿಗೆ ಸುರೇಶ್ ಬಳೂಟಗಿ ಆಯ್ಕೆ..!

ಕುಕನೂರು : ತಾಲೂಕಿನ ಕಕ್ಕಿಹಳ್ಳಿ ತಾಂಡ ಗ್ರಾಮದ ಯುವ ಮುಖಂಡ ಹಾಗೂ ಕರ್ನಾಟಕ ಗೌರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ, ಸುರೇಶ ಬಳೂಟಿಗಿ ಅವರಿಗೆ ಗೋವಾ ರಾಜ್ಯದ ಸುವರ್ಣ ಚಾರಿಟೇಬಲ್ ಟ್ರಸ್ಟ್ ನವರು ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಣೆ ಮಾಡಿರುತ್ತಾರೆ.

ಕುಕನೂರು ತಾಲೂಕಿನ ಅತ್ಯಂತ ಚಿಕ್ಕದಾದ ಕಕ್ಕಿಹಳ್ಳಿ ತಾಂಡದ ಯುವ ಮುಖಂಡನ ಸಮಾಜಮುಖಿ ಕಾರ್ಯವೈಕರಿಯನ್ನು ಗಮನಿಸಿದ ಸಂಸ್ಥೆಯು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಇದೆ ನವಂಬರ್ 11ರಂದು ಶನಿವಾರ ಸಾಯಂಕಾಲ ಗೋವಾ ರಾಜ್ಯದ ಕಲ್ಲಂಗುಟ್ಟ ಸನ್ ಸಿಟಿ ರೆಸಾರ್ಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ಮಹಾತ್ಮ ಗಾಂಧಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಈ ವೇಳೆ ಸುರೇಶ್ ಬಳಟಗಿ ವರದಿಗಾರರೊಂದಿಗೆ ಮಾತನಾಡುತ್ತಾ, ರಾಷ್ಟ್ರೀಯ ಪ್ರಶಸ್ತಿಗೆ ನನ್ನ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಅತ್ಯಂತ ಸಂತೋಷವಾಗುತ್ತಿದ್ದು ಇದಕ್ಕೆಲ್ಲ ನನ್ನ ಆತ್ಮೀಯರು ಹಾಗೂ ಮಾರ್ಗದರ್ಶಕರ ನಿರಂತರ ಸಹಾಯ ಸಹಕಾರ ಪ್ರಮುಖವಾಗಿದ್ದು ಅವರೆಲ್ಲರಿಗೂ ಸಹ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಗ್ರಾಮದ ಯುವ ಮುಖಂಡನಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು ಶುಭ ಹಾರೈಸಿರುತ್ತಾರೆ.

Prajavikshane

Chandru R Bhanapaur

Leave a Reply

error: Content is protected !!