You are currently viewing KOPPAL NEWS : ಸಚಿವ ಪ್ರಿಯಾಂಕ್‌ ಖರ್ಗೆ ಗೆ ಖಾರವಾಗಿ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು

KOPPAL NEWS : ಸಚಿವ ಪ್ರಿಯಾಂಕ್‌ ಖರ್ಗೆ ಗೆ ಖಾರವಾಗಿ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು

PV ನ್ಯೂಸ್‌ : 

KOPPAL NEWS : ಸಚಿವ ಪ್ರಿಯಾಂಕ್‌ ಖರ್ಗೆ ಗೆ ಖಾರವಾಗಿ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು

ಕೊಪ್ಪಳ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ದೇಶದ ರಕ್ಷಣೆಗೆ ನಿಂತ ಏಕೈಕ ದೇಶದ ಬಹುದೊಡ್ಡ ಸಂಘ, ಇಂತಹ ಆರ್‌ಎಸ್‌ಎಸ್‌ ಬಗ್ಗೆ ಹಗುರವಾಗಿ ಮಾತನಾಡುವುದು ಸಮಂಜಸವಲ್ಲ, ನೀನೊಬ್ಬ ಅಪ್ರಭುದ್ಧ ರಾಜಕಾರಣಿ ಎಂದು ಸಚಿವ ಪ್ರಿಯಾಂಕ ಖರ್ಗೆ ಗೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು ಖಾರವಾಗಿ ಉತ್ತರಿಸಿದರು.

ಇಂದು ನಗರದ ಬಿಜೆಪಿ ಕಾರ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಅವರೇ ನಿಮಗೆ ಸ್ವಲ್ಪನಾದ್ರೂ ಜ್ಞಾನ ಇದೀಯಾ?ಆರ್ ಎಸ್ ಎಸ್ ಬಗ್ಗೆ ಮಾತನಾಡಬೇಕಾದರೆ ಬಹಳ ಜಾಗೃತೆಯಿಂದ ಮಾತನಾಡುವುದನ್ನು ಮೊದಲು ನೀನು ಕಲಿಬೇಕು. ನೂರು ವರ್ಷ ಯಶಸ್ವಿಯಾಗಿ ಪೂರ್ಣ ಮಾಡಿದ ಯಾವುದಾದರೂ ಒಂದು ಸಂಘ-ಸಂಸ್ಥೆ ಇದ್ದರೆ, ಅದು ಆರ್ ಎಸ್ ಎಸ್ ಮಾತ್ರ. ಸದಾ ದೇಶ ರಕ್ಷಣೆಗೆ ದೇಶ ಸೇವೆಗೆ ನಿಂತಿರುವ ಆರ್ಎಸ್ಎಸ್ ಸಂಘಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡುತ್ತೀರಾ? ಮುಂಬರುವ 2028ರ ಚುನಾವಣೆಯಲ್ಲಿ ಹಿಂದೂ ಸಮಾಜದವರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಸಚಿವ ಪ್ರಿಯಾಂಕರ್ ಗೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್ಚರಿಕೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟ‌ರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುನಿಲ್ ಹೆಸರೂರು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಹೊರತಟ್ನಾಳ, ಓಬಿಸಿ ಪ್ರಧಾನ ಕಾರ್ಯದರ್ಶಿ ಫಕೀರಪ್ಪ ಆರ್ಯರ ಭಾಗವಹಿಸಿದ್ದರು.

Leave a Reply

error: Content is protected !!