You are currently viewing BREAKING : ಕುಕನೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ..! : ಬಸ್‌ ಇಲ್ಲದೆ ಪ್ರಯಾಣಿಕರ ಪರದಾಟ, ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ!!

BREAKING : ಕುಕನೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ..! : ಬಸ್‌ ಇಲ್ಲದೆ ಪ್ರಯಾಣಿಕರ ಪರದಾಟ, ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ!!

ಪ್ರಜಾ ವೀಕ್ಷಣೆ ಸುದ್ದಿ : 

BREAKING : ಕುಕನೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ..! : ಬಸ್‌ ಇಲ್ಲದೆ ಪ್ರಯಾಣಿಕರ ಪರದಾಟ, ಪ್ರತಿಭಟನಾಕಾರರು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ!!

ಕುಕನೂರು : ಪಟ್ಟಣದಲ್ಲಿ ಪ್ರತಿಭಟನೆ ಕಾವೇರಿದ್ದು, ಮೆಡಿಕಲ್ ಶಾಪ್,ಆಸ್ಪತ್ರೆಗಳು, ಇವಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಕುಕುನೂರು ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎನ್ನಬಹುದು.

ಇಂದು ಶುಭಕಾರ್ಯಗಳಿಗೆ ರಾಜಯೋಗ ಒಳ್ಳೆಯ ದಿನ ಇದ್ದು, ಎಲ್ಲೆಂದರಲ್ಲಿ ಮದುವೆ ಹಾಗೂ ಗೃಹಪ್ರವೇಶಗಳು ಶುಭ ಕಾರ್ಯಗಳು ನಡೆಯುತ್ತಿದೆ. ಇಂತಹ ಸ್ಥಳಗಳಲ್ಲಿಗೆ ಹೋಗುವ ಜನರು, ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಸುತ್ತಮುತ್ತಲಿನ ಊರುಗಳಿಗೆ ಹೋಗುವ ಜನರು, ಹಿರಿಜೀವಗಳು ಸಣ್ಣ ಮಕ್ಕಳನ್ನು ಕರೆದುಕೊಂಡು ನಡೆದುಕೊಂಡೆ ಹೋಗುವ ಪರಿಸ್ಥಿತಿ ಕೂಡ ಕಂಡು ಬಂತು.  ಈ ಬಂದ್ ನಿಂದಾಗಿ ಸಾಕಷ್ಟು ಸಾರ್ವಜನಿಕರಿ,ಗೆ ವಿದ್ಯಾರ್ಥಿಗಳಿಗೆ ತೊಂದರೆಗಳು ಉಂಟಾದವು. ಪ್ರತಿಭಟನಾನಿರತರು ರಸ್ತೆ ಮಧ್ಯದಲ್ಲಿ ಪ್ರಮುಖ ವೃತ್ತಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

 

ಶಾಲೆಗಳಲ್ಲಿ ಮಕ್ಕಳಿಲ್ಲದೇ ಶಾಲಾ ಆವರಣ ಬಿಕೋ ಎನ್ನುತ್ತಿರುವುದು

Prajavikshane

Chandru R Bhanapaur

Leave a Reply

error: Content is protected !!