ಮುದಗಲ್ಲ ವರದಿ..
ಲಿಂಗಸೂರು ಹಾಗೂ ಮುದಗಲ್ಲ ಪುರಸಭೆ ಗೆ ಆಡಳಿತಾಧಿಕಾರಿ ನೇಮಕ..

ಮುದಗಲ್ಲ: ಲಿಂಗಸುಗೂರು ಹಾಗೂ ಮುದಗಲ್ ಪುರಸಭೆಗಳಿಗೆ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕುಲಶಟ್ಟಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಮುದಗಲ್ ಪುರಸಭೆ ಅವಧಿ ಅಕ್ಟೋಬರ್ 24, ಲಿಂಗಸುಗೂರು ಪುರಸಭೆ ಅವಧಿ ಅಕ್ಟೋಬರ್ 30ಕ್ಕೆ ಪೂರ್ಣಗೊಂಡಿದೆ.

ಈ ಹಿನ್ನೆಲೆಯಲ್ಲಿ ನಿತ್ಯದ ಕಾಯ೯ ನಿರ್ವಹಣೆ ಹಾಗೂ ಪುರಸಭೆ ಆಡಳಿತ ದೃಷ್ಟಿಯಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆದೇಶದಲ್ಲಿ ತಿಳಿಸಿದ್ದಾರೆ.
ವರದಿ:- ಮಂಜುನಾಥ ಕುಂಬಾರ