ಮುದಗಲ್ಲ :- GST 2.0: ಜಿಎಸ್‌ಟಿ 2.0- ಮುದಗಲ್ಲ ಬಿಜೆಪಿ ಘಟಕವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ…

ಮುದಗಲ್ಲ :- GST 2.0: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆಯನ್ನು ಜಾರಿ ಮಾಡಿರುವುದನ್ನು ಸ್ವಾಗತಿಸಿ, ಸೋಮವಾರ ಮುದಗಲ್ಲ ನ ಅಂಬೇಡ್ಕರ್ ಸರ್ಕಲ್,ಮುಂದೆ ರಸ್ತೆಯಲ್ಲಿ ಮುದಗಲ್ಲ ಬಿಜೆಪಿ ಘಟಕದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುದಗಲ್ಲ ನಗರ ಘಟಕದ ಅಧ್ಯಕ್ಷ ರಾದ ಕರಿಯಪ್ಪ ಯಾದವ ಆವರು
ಜಿ.ಎಸ್.ಟಿ. ಸರಳೀಕೃತಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು.
ನಂತರ ಪಟ್ಟಣದಲ್ಲಿನ ಮಳಿಗೆಗಳಿಗೆ ತೆರಳಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಮುದಗಲ್ಲ ಬಿಜೆಪಿ,ಮುದಗಲ್ಲ ನಗರ ಘಟಕದ ಅಧ್ಯಕ್ಷರಾದ ಕರಿಯಪ್ಪ ಯಾದವ, ಸಣ್ಣ ಸಿದ್ದಯ್ಯ ಮೆಗಳಪೇಟೆ , ಉದಯ ಕುಮಾರ್ ಕಂಬಾರ, ಮಲ್ಲಪ್ಪ ಮಾಟೂರ್,ಮಂಜನಾಥ ನಂದವಾಡಗಿ ,ನಾಗರಾಜ ತಳವಾರ,ಶರಣಪ್ಪ ಹಂಚನಾಳ,ರವಿ ಕಟ್ಟಿಮನಿ, ಹಾಗೂ ನೂರಾರು ಕಾಯ೯ಕತ೯ರು ಉಪಸ್ಥಿತರಿದ್ದರು… ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ