ಮುದಗಲ್ಲ :- ಆಶಿಹಾಳ ತಾಂಡಾದ ಭಾಗ್ಯ ರತ್ನ ನಾಯ್ಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ…

ಮುದಗಲ್ಲ :- ಆಶಿಹಾಳ ತಾಂಡಾದ ಭಾಗ್ಯ ರತ್ನ ನಾಯ್ಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ…

ಮುದಗಲ್ಲ :- ಕರ್ನಾಟಕ ಉಚ್ಛ ನ್ಯಾಯಾಲಯವು 83 ಅಭ್ಯರ್ಥಿಗಳ ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು,
ಲಿಂಗಸುಗೂರು ತಾಲೂಕಿನ ಮುದಗಲ್ಲ ಪಟ್ಟಣದ ಸಮೀಪದ  ಆಶಿಹಾಳ ತಾಂಡಾದ ಕುಮಾರಿ ಭಾಗ್ಯ ರತ್ನನಾಯ್ಕ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಭಾಗ್ಯರತ್ನ ಅವರು ತಾಂಡಾದ ದಿ.ತಿಪ್ಪಣ್ಣ ನಾಯ್ಕ ಮತ್ತು ದೇವಮ್ಮ ರವರ ಮೊಮ್ಮಗಳಾಗಿದ್ದು, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಡಾ.ಕಸನಪ್ಪ ನಾಯ್ಕ ಮತ್ತು ಸುಲೋಚನಾ ನಾಯ್ಕರವರ ಪುತ್ರಿಯಾಗಿದ್ದಾರೆ.
2022ರಲ್ಲಿ ಕಾನೂನು ಪದವಿಯಲ್ಲಿ ಹತ್ತನೇ ರ‍್ಯಾಂಕ್
ಪಡೆದಿದ್ದಾರೆ 2025ರಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಭಾಗ್ಯರತ್ನ ನಾಯ್ಕ ಅವರು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ನಡೆಸಿದ ಸಿವಿಲ್ ನ್ಯಾಯಾಧೀಶ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅವರು ಎಂಟನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.

 ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!