LOCAL NEWS : ಕೀರ್ತನೆಗಳ ಮೂಲಕ ಮಾನವೀಯ ಮೌಲ್ಯವನ್ನು ಪಸರಿಸಿದ ಕನಕದಾಸರು : ಸಂಸದ ರಾಜಶೇಖರ ಹಿಟ್ನಾಳ್
ಕುಕನೂರು ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಕನಕದಾಸರ ಜಯಂತಿ ಆಚರಣೆ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.
ಕುಕನೂರು : ‘ತಮ್ಮ ಕೀರ್ತನೆಗಳ ಮೂಲಕ ಕನಕದಾಸರು ಮಾನವೀಯ ಮೌಲ್ಯವನ್ನು ಪಸರಿಸಿದರು’ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಪಟ್ಟಣದಲ್ಲಿ ಜರುಗಿದ ಕನಕದಾಸರ ಜಯಂತಿ ಆಚರಣೆ ಮೆರವಣಿಗೆ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಅವರು, ‘ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಮಾನವೀಯ ಗುಣಗಳನ್ನು ನೀಡಿದ್ದಾರೆ. ಈ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಾಜಿ ಸಚಿವ ಹಾಗೂ ಮಾಜಿ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಕನಕದಾಸರು ಮಹಾನ್ ದೈವ ಭಕ್ತರು, ಕನಕದಾಸರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮ ದರ್ಶನ ಭಾಗ್ಯ ನೀಡಿದ್ದರು. ಕನಕದಾಸರ ಭಕ್ತಿ ಪರಂಪರೆಯಲ್ಲಿ ಪ್ರತಿಯೊಬ್ಬರು ಸಾಗಬೇಕು. ಅವರ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಿ ಬಾಳನ್ನು ಹಸನ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಮುಖಂಡ ನವೀನ ಗುಳಗಣ್ಣವರ್ ಅವರು ಕನಕದಾಸರ ಕುರಿತು ಭಕ್ತಿ ಭಾವದಿಂದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮಂಜುನಾಥ ಕಡೆಮನಿ, ಶ್ರೀನಿವಾಸ ತಿಮ್ಮಾಪೂರ, ಶೇಖಪ್ಪ ಕಂಬಳಿ, ಲಕ್ಷ್ಮಣ ಬೆದವಟ್ಟಿ, ಮಹೇಶ ಗಾವರಾಳ ಇತರರಿದ್ದರು. ಪಟ್ಟಣದಲ್ಲಿ ಅದ್ದೂರಿಯಾಗಿ ಮೆರವಣಿಗೆ ಜರುಗಿತು.