LOCAL NEWS : ಕುಕನೂರು|ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾಕ್ಕೆ ಚಾಲನೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು (ಜೂನ್ 30): “ದೋಷರಹಿತವಾದ ಮತದಾರರ ಪಟ್ಟಿಯೇ ನಮ್ಮ ದೇಶದ ಸದೃಢ ಪ್ರಜಾಪ್ರಭುತ್ವದ ತಳಪಾಯವಾಗಿದೆ,” ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸಂತೋಷ ಬಿರಾದರ್ ಪಾಟಿಲ್ ಅವರು ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾ ಕಾರ್ಯಕ್ರಮ- 2026’ ಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೇಶಿರೂರ ಅವರು ಜಂಟಿಯಾಗಿ ಚಾಲನೆ ನೀಡಿದರು.
ಜುಲೈ 29 ರವರೆಗೆ ಅಭಿಯಾನ…!!

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, “ಯಾವುದೇ ಅರ್ಹ ಮತದಾರನು ತನ್ನ ಮತದಾನದ ಹಕ್ಕಿನಿಂದ ವಂಚಿತನಾಗಬಾರದು. ಅದಕ್ಕಾಗಿ 18 ವರ್ಷ ತುಂಬಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಇತ್ತೀಚಿನ ಫೋಟೋವನ್ನು ಸೇರಿಸಲು ಅಥವಾ ತಿದ್ದುಪಡಿ ಮಾಡಲು ಮುಕ್ತ ಅವಕಾಶವಿದೆ. ಈ ಅಭಿಯಾನವು ಜುಲೈ 29 ರವರೆಗೆ ಚಾಲನೆಯಲ್ಲಿರುತ್ತದೆ,” ಎಂದು ಮಾಹಿತಿ ನೀಡಿದರು.
ಮತದಾರರಿಗೆ ಕರೆ: ಬಿಎಲ್‌ಒ (BLO) ಗಳು ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು. ಗ್ರಾಮೀಣ ಪ್ರದೇಶದ ಮತದಾರರ ಅನುಕೂಲಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ವಿಶೇಷ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ..!!
