ಕುಕನೂರು :ರಾಷ್ಟ್ರೀವಾದಿ ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಹನಮಂತಪ್ಪ ಕುರಿ ಇವರನ್ನು ನೇಮಕ ಮಾಡಲಾಗಿದೆ ಎಂದು ಎನ್.ಸಿ.ಪಿಯ ರಾಜ್ಯಧ್ಯಕ್ಷ ಆರ್ ಹರಿ ತಿಳಿಸಿದ್ದಾರೆ.
ಕುಕನೂರು ಪಟ್ಟಣದಲ್ಲಿ ಶುಕ್ರವಾರ ಎನ್.ಸಿ.ಪಿಯ ರಾಜ್ಯಧ್ಯಾಕ್ಷ ಆರ್ ಹರಿ ಅವರ ನಿವಾಸದಲ್ಲಿ ಹನಮಂತಪ್ಪ ಕುರಿ ಇವರಿಗೆ ಕೊಪ್ಪಳ ಜಿಲ್ಲೆಯ ಎನ್.ಸಿ.ಪಿ ಪಕ್ಷದ ಜಿಲ್ಲಾಧ್ಯಕ್ಷರು ಎಂದು ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಿ. ಸಿಹಿ ಹಂಚಿ ಸಂಭ್ರಮಿಸಿದರು.
ಮೂಲಃ ತಾಲೂಕಿನ ಇಟಗಿ ಗ್ರಾಮದವರಾದ ಹನಮಂತಪ್ಪ ಕುರಿ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ, ವಿವಿಧ ರಾಜಕೀಯ ಪಕ್ಷಗಳ ಹಾಗೂ ನಾಯಕರ ಜೊತೆ ಕೆಲಸ ಮಾಡುತ್ತಾ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದು, ಇದೀಗ ಎನ್.ಸಿ.ಪಿ ಜಿಲ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎನ್.ಸಿ.ಪಿಯ ಜಿಲ್ಲಾಧ್ಯಕ್ಷರಾಗಿ ಹನಮಂತಪ್ಪ ಕುರಿ ನೇಮಕ
